* ಹವಾಮಾನ ಬಿಕ್ಕಟ್ಟಿಗೆ ಕಾರಣವಾದ ಪಳೆಯುಳಿಕೆ ಇಂಧನಗಳ ಬಳಕೆಯನ್ನು ನಿಲ್ಲಿಸಬೇಕು. ಈ ಕಾರ್ಯವು 'ನ್ಯಾಯಯುತ ಹಾಗೂ ನಿಷ್ಪಕ್ಷಪಾತ' ತತ್ವದಡಿ ನಡೆಯಬೇಕು ಎಂಬ ಮಹತ್ವದ ನಿರ್ಣಯವನ್ನು ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಸಿಒಪಿ28) ಡಿಸೆಂಬರ್ 13 ರಂದು ಕೈಗೊಳ್ಳಲಾಗಿದೆ.* ಸಿಒಪಿ28 ಅಧ್ಯಕ್ಷ ಸುಲ್ತಾನ್ ಅಲ್-ಜುಬೇರ್ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪ್ಪಂದವನ್ನು ಘೋಷಿಸಿದ್ದಾರೆ.* ಈ ಸಮಾವೇಶದಲ್ಲಿ 200 ರಾಷ್ಟ್ರಗಳ ಪ್ರತಿನಿಧಿಗಳ ಪಾಲ್ಗೊಂಡಿದ್ದರು.