* ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ಅವರು ನವೆಂಬರ್ 18 ರಂದು (ಸೋಮವಾರ) ನೂತನ ಪ್ರಧಾನಿ ಮತ್ತು ಸಚಿವರನ್ನು ನೇಮಕ ಮಾಡಲಿದ್ದಾರೆ.* ಡಿಸ್ಸಾನಾಯಕೆ ಅವರ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷವು ಸಂಸತ್‌ಗೆ ಈಚೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿತ್ತು. * ಸಂಸತ್ತಿನ ಒಟ್ಟು 225 ಸ್ಥಾನಗಳಲ್ಲಿ 159 ಸ್ಥಾನಗಳನ್ನು ಎನ್‌ಪಿಪಿ ಗೆದ್ದುಕೊಂಡಿದೆ. ತಮಿಳರು ಪ್ರಾಬಲ್ಕ ಹೊಂದಿರುವ ಜಾಪ್ಪಾದಲ್ಲಿಯೂ ಎನ್‌ಪಿಪಿ ಅಭೂತಪೂರ್ವ ಗೆಲುವು ಪಡೆದಿತ್ತು.* ಸಂಪುಟದ ಸದಸ್ಯ ಬಲ ಗರಿಷ್ಠ 25 ಆಗಿರಲಿದೆ' ಎಂದು ಎನ್‌ಪಿಪಿ ಹಿರಿಯ ವಕ್ತಾರ ಟಿಲ್ವಿನ್ ಸಿಲ್ವಾ ತಿಳಿಸಿದರು.* ಶ್ರೀಲಂಕಾ ಸಂವಿಧಾನದಲ್ಲಿ ಗರಿಷ್ಠ 30 ಸಚಿವರ ನೇಮಕಕ್ಕೆ ಅವಕಾಶವಿದ್ದು, ಸಹಾಯಕ ಸಚಿವರನ್ನು ಸೇರಿಸಿದರೆ, 40ಕ್ಕೂ ಹೆಚ್ಚು ಸದಸ್ಯರನ್ನು ನೇಮಿಸಬಹುದು. 'ಸಣ್ಣ ಗಾತ್ರದ ಸರ್ಕಾರ ರಚನೆಯಿಂದ ಆರ್ಥಿಕ ಹೊರೆ ಕುಗ್ಗಿಸಬಹುದು' ಎಂದು ಟಿಲ್ವಿನ್ ಸಿಲ್ವಾ ಅವರು ತಿಳಿಸಿದರು.