* ಮಾರ್ಕ್ಸ್‌ವಾದಿ ನಾಯಕರಾಗಿದ್ದ ಅನುರ ಕುಮಾರ ಡಿಸ್ಸಾನಾಯಕ ಅವರನ್ನು ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.* 2024 ರ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನ್ಯಾಷನಲ್‌ ಪೀಪಲ್ಸ್ ಪವರ್ (ಎನ್‌ಪಿಪಿ) ನಾಯಕ ಅನುರ ಕುಮಾರ ಡಿಸ್ಸಾನಾಯಕ ಗೆಲುವು ಸಾಧಿಸಿದ್ದಾರೆ.* ಅನುರ ಕುಮಾರ ಅವರು ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿದರು ಮತ್ತು ದ್ವೀಪ ರಾಷ್ಟ್ರದ ಒಂಬತ್ತನೇ ಕಾರ್ಯಕಾರಿ ಅಧ್ಯಕ್ಷರಾಗಲಿದ್ದಾರೆ. ಅನುರ ಕುಮಾರ ಡಿಸ್ಸಾನಾಯಕ ಶೇ.42.31ರಷ್ಟು ಮತ ಪಡೆದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.* 55 ವರ್ಷದ ದಿಸಾನಾಯಕ ಅವರು ದಿಸಾನಾಯಕ ಇಂದು(ಸೆ.23) ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ರನಿಲ್ ವಿಕ್ರಮಸಿಂಘೆ ಅವರು ದುಪ್ಪಟ್ಟು ಮಾಡಿದ್ದ ಆದಾಯ ತೆರಿಗೆ ಕಡಿತ, ಆಹಾರ ಮತ್ತು ಔಷಧಿಗಳ ಮೇಲಿನ ಮಾರಾಟ ತೆರಿಗೆ ಕಡಿತಗೊಳಿಸಲು ದಿಸ್ಸಾನಾಯಕೆ ವಾಗ್ದಾನ ಮಾಡಿದ್ದಾರೆ.* ಆಗಸ್ಟ್ 2020ರಲ್ಲಿ ನಡೆದ ಈ ಹಿಂದಿನ ಸಂಸದೀಯ ಚುನಾವಣೆಯಲ್ಲಿ ದಿಸಾನಾಯಕ ಅವರ ಪಕ್ಷವು ಶೇಕಡಾ 4ಕ್ಕಿಂತ ಕಡಿಮೆ ಮತಗಳನ್ನು ಗಳಿಸಿತ್ತು.