* ಸೆಪ್ಟೆಂಬರ್ 22 ರಲ್ಲಿ ನಡೆದ 2024 ಚೆಸ್ ಒಲಿಂಪಿಯಾಡ್‌ನ ಆರಂಭ ವಿಭಾಗದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.* ಎರಡನೇ ಸ್ಥಾನದಲ್ಲಿರುವ ಚೀನಾ ಯುಎಸ್ಎ ವಿರುದ್ಧ ಎರಡು ಬೋರ್ಡ್‌ಗಳಲ್ಲಿ ಪಾಯಿಂಟ್‌ಗಳನ್ನು ಕಳೆದುಕೊಂಡ ನಂತರ ತಂಡವು ಕೊನೆಯ ಸುತ್ತಿನಲ್ಲಿ ತನ್ನ ಮೊದಲ ಚಿನ್ನದ ಪದಕ ಗಳಿಸಿತು.* ಭಾರತದ ಅರ್ಜುನ್ ಎರಿಗೈಸಿ ಮತ್ತು ಡಿ ಗುಕೇಶ್ ತಂಡಕ್ಕೆ ಗೆಲುವು ಸಾಧಿಸಿಕೊಟ್ಟರು. ಗುಕೇಶ್ ಅವರು ರಷ್ಯಾದ ವ್ಲಾಡಿಮಿರ್ ಫೆಡೋಸೀವ್ ವಿರುದ್ಧ ಜಯಗಳಿಸುವ ಮೂಲಕ ಒಲಿಂಪಿಯಾಡ್ ಮುಕ್ತಾಯಗೊಳಿಸಿದರು.ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆಲ್ಲಲು ಇವರ ಆಟ ಸಹಾಯವಾಯಿತು.* ಅರ್ಜುನ್ ಎರಿಗೈಸಿ ಸರ್ಬಿಯಾದ ಜಾನ್ ಸುಬೆಲ್ಜ್ ವಿರುದ್ಧ ಗೆಲುವು ಸಾಧಿಸಿದರು. ಪ್ರಗ್ನಾನಂದ ಅವರು ತಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದರು. ಭಾರತ ಅಂತಿಮ ಸುತ್ತಿನಲ್ಲಿ ಅಮೆರಿಕವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.* ಮುಕ್ತ ವಿಭಾಗದ ಪುರುಷರ ತಂಡವು ಗುಕೇಶ್, ಎರಿಗೈಸಿ, ಪ್ರಗ್ನಾನಂದ ಆರ್, ವಿದಿತ್ ಗುಜರಾತಿ, ಪೆಂಟಾಲ ಹರಿಕೃಷ್ಣ ಮತ್ತು ಶ್ರೀನಾಥ್ ನಾರಾಯಣನ್ ಅವರನ್ನು ಒಳಗೊಂಡಿತ್ತು.* ಇದು ಭಾರತದ ಮೊದಲ ಒಲಿಂಪಿಯಾಡ್ ಚಿನ್ನವನ್ನು ಗುರುತಿಸುತ್ತದೆ. ಅಂತಿಮ ಸುತ್ತಿಗೆ ಮುನ್ನಡೆದ ಭಾರತ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಚೀನಾ ಮತ್ತು ಸ್ಲೊವೇನಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.ಚಿನ್ನಕ್ಕೆ ಕೊರಳೊಡ್ಡಿದ ಮಹಿಳಾ ತಂಡ:- * 45ನೇ ಫಿಡೆ ಮಹಿಳಾ ಚೆಸ್ ಒಲಿಂಪಿಯಾಡ್‌ನಲ್ಲೂ ಭಾರತ ಮಹಿಳಾ ತಂಡ ಚಿನ್ನಕ್ಕೆ ಕೊರಳೊಡ್ಡಿದೆ. ಭಾರತ ಮಹಿಳಾ ತಂಡದಲ್ಲಿ ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್‌ಬಾಬು, ದಿವ್ಯಾ ದೇಶಮುಖ್, ವಾಂತಿಕಾ ಅಗರವಾಲ್, ತಾನಿಯಾ ಸಚ್‌ದೇವ್ ಮತ್ತು ಅಭಿಜಿತ್ ಕುಂಟೆ ಇದ್ದರು.* ಅಂತಿಮ ಸುತ್ತಿನಲ್ಲಿ ದಿವ್ಯಾ ದೇಶಮುಖ್, ಡಿ ಹರಿಕಾ ಮತ್ತು ವಾಂತಿಕಾ ಅಗರ್ವಾಲ್ ತಮ್ಮ ಎದುರಾಳಿಗಳ ವಿರುದ್ಧ ಗೆದ್ದರು, ಆರ್ ವೈಶಾಲಿ ಡ್ರಾಗೆ ತೃಪ್ತಿಪಡಬೇಕಾಯಿತು. ಪ್ರಶಸ್ತಿ ಬೆನ್ನತ್ತಿದ ಕಜಕಸ್ತಾನವನ್ನು ಡ್ರಾ ಮಾಡಿಕೊಂಡಿದ್ದ ಅಮೆರಿಕ, ಭಾರತದ ವನಿತೆಯರು ಚೊಚ್ಚಲ ಚಿನ್ನಕ್ಕೆ ಕೊರಳೊಡ್ಡಲು ನೆರವಾದರು.