* ಮಾಜಿ ನಾಯಕ ಸನತ್ ಜಯಸೂರ್ಯ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಪೂರ್ಣಾವಧಿಯ ಮುಖ್ಯ ಕೋಚ್ ಆಗಿ ಸೋಮವಾರ (ಅಕ್ಟೋಬರ್ 7) ನೇಮಕ ಮಾಡಲಾಗಿದೆ.* ಸನತ್ ಜಯಸೂರ್ಯ ಅವರು ಹೋದ ಜುಲೈನಲ್ಲಿ ಹಂಗಾಮಿ ಕೊಚ ಆಗಿ ನೇಮಕವಾಗಿದ್ದರು. ಇಂಗ್ಲೆಂಡ್ ಮತ್ತು ಭಾರತ ಎದುರಿನ ಸರಣಿಗಳಲ್ಲಿ ಉತ್ತಮ ಕಾರ್ಯನಿರ್ವಹಣೆಯ ಮೂಲಕ ಅವರು ಗಮನ ಸೆಳೆದಿದ್ದಾರೆ. ಅದರಿಂದ ಜಯಸೂರ್ಯ ಅವರನ್ನು ಪೂರ್ಣಾವಧಿಯ ಕೊಚ ಆಗಿ ನೇಮಕ ಮಾಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.* ಜಯಸೂರ್ಯ ಅವರ ನಿರ್ದೇಶನದಲ್ಲಿ ಶ್ರೀಲಂಕಾ ತಂಡವು ಭಾರತ ತಂಡದ ಎದುರು 27ವರ್ಷಗಳ ನಂತರ ಏಕದಿನ ಸರಣಿ ಜಯಸಿತ್ತು. ಅದರ ನಂತರ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ನಂತರ ಬಲಿಷ್ಠ ತಂಡವಾದ ಇಂಗ್ಲೆಂಡ್ ತಂಡವನ್ನು ಸಹ ಸೋಲಿಸಿತ್ತು.* ಶ್ರೀಲಂಕಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 2-0ಯಿಂದ ಜಯಿಸಿತ್ತು.* ಜಯಸೂರ್ಯ ಅವರು 2026 ರ ಮಾರ್ಚ್ 31 ರವರೆಗೆ ಕಾರ್ಯನಿರ್ವಹಿಸುವರು ಎಂದು ಏಸ್ಎಲ್ ಸಿ ಪ್ರಕಣೆಯಲ್ಲಿ ತಿಳಿಸಿದೆ.