* ದ್ವಿಪಕ್ಷೀಯ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ- ಮಾಲ್ಡೀವ್ಸ್ ಕರೆನ್ಸಿ ವಿನಿಮಯ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳಿಗೆ ಅಕ್ಟೋಬರ್ 07 ರಂದು ಸಹಿ ಹಾಕಿದವು.* ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಸಮಗ್ರ ಆರ್ಥಿಕ ಹಾಗೂ ಜಲಸಾರಿಗೆ ಸಹಕಾರಕ್ಕಾಗಿ ಹೊಸ ನೀಲನಕ್ಷೆಯೊಂದನ್ನು ಅನಾವರಣಗೊಳಿಸಿದರು.* ಮಾಲ್ಡಿವ್ಸ್ ನಲ್ಲಿ ಬಂದರು, ರಸ್ತೆ, ಶಾಲೆಗಳು ಮತ್ತು ವಸತಿ ನಿರ್ಮಿಸಲು ತನ್ನ ಸಹಕಾರ ಮುಂದುವರಿಸಲು ಭಾರತ ಒಪ್ಪಿದೆ.* ಈ ಒಪ್ಪಂದದಿಂದಾಗಿ ದ್ವೀಪಸಮೂಹ ರಾಷ್ಟ್ರ ಮಾಲ್ಡೀವ್ಸ್ ಗೆ ವಿದೇಶಿ ವಿನಿಮಯ ಮೀಸಲು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಸಾಧ್ಯವಾಗಲಿದೆ.* ಸುಮಾರು 400 ಮಿಲಿಯನ್ ಡಾಲರ್ (3,000 ಕೋಟಿ ರೂ) ಗಾತ್ರದ ಒಪ್ಪಂದ ಇದಾಗಿದ್ದು, 12 ತಿಂಗಳಿನಿಂದ ಸರಿಯಿಲ್ಲದ ಭಾರತ- ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧ ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುವ ನಿರೀಕ್ಷೆ ಇದೆ.* ಕಳೆದ ವರ್ಷ ಮಾಲ್ಡೀವ್ಸ್ ನ 3 ಸಚಿವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಪರಿಣಾಮ ಭಾರತ- ಮಾಲ್ಡೀವ್ಸ್ ನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು.* ಭಾರತ ಕೋವಿಡ್ ಲಸಿಕೆಗಳನ್ನು ಪೂರೈಸುವುದು ಸೇರಿದಂತೆ, ದ್ವೀಪ ರಾಷ್ಟ್ರದ ಮೇಲೆ ಪರಿಣಾಮ ಬೀರುವ ತುರ್ತು ಪರಿಸ್ಥಿತಿಗಳಿಗೆ 'ಮೊದಲ ಪ್ರತಿಕ್ರಿಯೆ'ಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.* "400 ಮಿಲಿಯನ್ ಡಾಲರ್ ದ್ವಿಪಕ್ಷೀಯ ಕರೆನ್ಸಿ ವಿನಿಮಯಕ್ಕೆ ಹೆಚ್ಚುವರಿಯಾಗಿ ₹ 30 ಶತಕೋಟಿ ನೆರವು ನೀಡುವ ಭಾರತದ ನಿರ್ಧಾರಕ್ಕೆ ನಾನು ಕೃತಜ್ಞನಾಗಿದ್ದೇನೆ. ಇದು ವಿದೇಶೀ ವಿನಿಮಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖವಾಗಿದೆ" ಎಂದು ಮುಯಿಝು ಹೇಳಿದ್ದಾರೆ.* ಮುಯಿಜು ಅವರು ಇಂದು ಅ.8ರಂದು ಆಗ್ರಾ ಮತ್ತು ಮುಂಬೈಗೆ ಹಾಗೂ ಅಕ್ಟೋಬರ್ 9 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.