* ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ಶೀತಲ್ ರಾಜ್ ಅವರು ಚೋ ಓಯು ಪರ್ವತವನ್ನು ಏರಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಚೋ ಓಯು ಪರ್ವತವು 8,188 ಮೀಟರ್ ಎತ್ತರದ ಹೆಮ್ಮೆಯ ಶೃಂಗವಾಗಿದ್ದು, ಹಿಮಾಲಯ ಪರ್ವತ ಸರಣಿಯ ಭಾಗವಾಗಿದೆ. ಶೀತಲ್ ಅವರು ತಮ್ಮ ಈ ಸಾಧನೆಯ ಮೂಲಕ ಭಾರತದ ಪರ್ವತಾರೋಹಣ ಕ್ಷೇತ್ರದಲ್ಲಿ ಒಂದು ಹೊಸ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.* ಪರ್ವತಾರೋಹಿ ಶೀತಲ್ ರಾಜ್ ಟಿಬೆಟ್-ನೇಪಾಳ ಗಡಿಯಲ್ಲಿರುವ ವಿಶ್ವದ 6 ನೇ ಅತಿ ಎತ್ತರದ ಪರ್ವತವಾದ ಮೌಂಟ್ ಚೋ ಓಯು (8188 ಮೀ) ಅನ್ನು ಯಶಸ್ವಿಯಾಗಿ ಏರಿದರು. ಈ ಅದ್ಭುತ ಸಾಧನೆ ಮಾಡುವ ಮೂಲಕ ಶೀತಲ್ ಚೋ ಓಯು ಪರ್ವತವನ್ನು ಏರಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. * 8,000 ಮೀಟರ್ ಅಥವಾ ಹೆಚ್ಚು ಎತ್ತರದ  ಮೌಂಟ್ ಎವರೆಸ್ಟ್, ಮೌಂಟ್ ಅನ್ನಪೂರ್ಣ, ಮೌಂಟ್ ಕಾಂಚನಜುಂಗಾ ಒಟ್ಟು 5 ಪರ್ವತಗಳನ್ನು ಏರಿದ ಭಾರತದ ಮಹಿಳೆಯಾಗಿ ಹೆಸರಾಗಿದ್ದಾರೆ.* ನೇಪಾಳದ 18 ವರ್ಷದ ನಿಮಾ ರಿಂಜಿ ಶೆರ್ಪಾ ಅವರು ಚೀನಾದ ಶಿಶಾಪಾಂಗ್ಮಾ ಪರ್ವತದ ಯಶಸ್ವಿ ಶಿಖರದೊಂದಿಗೆ ವಿಶ್ವದ ಅತ್ಯಂತ ಎತ್ತರದ 14 ಪರ್ವತಗಳನ್ನು (8,000 ಮೀಟರ್‌ಗಿಂತ ಹೆಚ್ಚು) ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.