* ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್‌ ಸಿನ್ನರ್‌ ಅಕ್ಟೋಬರ್13 ರಂದು ಶಾಂಘೈಯಲ್ಲಿ ನಡೆದ ಶಾಂಘೈ ಮಾಸ್ಟರ್ಸ್‌ ಫೈನಲ್‌ನಲ್ಲಿ 1000 ಟೂರ್ನಿಯ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ 24 ಬಾರಿಯ ಗ್ರ್ಯಾನ್‌ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿದ್ದಾರೆ.* 23  ವಯಸ್ಸಿನ ಸಿನ್ನರ್‌  7-6(7/4), 6-3 ಸೆಟ್‌ಗಳಿಂದ ನಾಲ್ಕನೇ ಶ್ರೇಯಾಂಕದ ಸರ್ಬಿಯಾದ ಆಟಗಾರರನ್ನು ಸೋಲಿಸಿದರು. ಈ ಹೋರಾಟವು ಕೇವಲ 1 ಗಂಟೆ 37 ನಿಮಿಷದಲ್ಲಿ ಕೊನೆಗೊಂಡಿತು.* ಆಸ್ಟ್ರಿಯಾದ ಓಪನ್ ಮತ್ತು ಅಮೇರಿಕ ಓಪನ್ ಚಾಂಪಿಯನ್ ಆಗಿರುವ ಸಿನ್ನರ್ ಎರಡು ವಾರದ ಹಿಂದೆ ಚೀನಾ ಓಪನ್ ಚಾಂಪಿಯನ್ ಆಗಿದ್ದರು.* 2016ರಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಒಂಬತ್ತು ಪ್ರಶಸ್ತಿ ಗೆದ್ದ ಬಳಿಕ ಒಂದು ಋತುವಿನಲ್ಲಿ ಆರಕ್ಕೂ ಹೆಚ್ಚು ಕಿರೀಟ ಮುಡಿಗೇರಿಸಿಕೊಂಡ ಮೊದಲ ಆಟಗಾರ ಎಂಬ ಹಿರಿಮೆಗೆ ಸಿನ್ನರ್ ಪಾತ್ರವಾದರು. ಮತ್ತು ಜೊಕೊವಿಕ್ ವಿರುದ್ಧ ಗೆಲುವಿನ ದಾಖಲೆಯನ್ನು 4-4 ಕ್ಕೆ ಸಮಗೊಳಿಸಿದರು.* ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಅವರು ವುಹಾನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ ಚಾಂಪಿಯನ್ ಚೀನಾದ ಝಂಗ್ ಕ್ವಿನೈನ್ ಅವರನ್ನು ಮಣಿಸಿ ಸತತ ಮೂರನೇ ಬಾರಿ ಇಲ್ಲಿ ಪ್ರಶಸ್ತಿ ಗೆದ್ದರು.