* ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಯೋಜನೆಗಳನ್ನು ಅತ್ಯುತ್ತಮವಾದ ರೀತಿಯಲ್ಲಿ ತಲುಪಿಸುವ ಉದ್ದೇಶದಿಂದ ಆಯುಷ್ಮಾನ್‌ ಭವ ಅಭಿಯಾನವನ್ನು ಸೆಪ್ಟೆಂಬರ್ 13 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾರಂಭಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.* “ಆಯುಷ್ಮಾನ್ ಭವ” ಅಭಿಯಾನವನ್ನು ಸೆಪ್ಟೆಂಬರ್ 13 ರಂದು ಪ್ರಾರಂಭಿಸಲಾಗುತ್ತಿದ್ದರೆ, ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಪ್ರಾರಂಭವಾಗುವ ‘ಸೇವಾ ಪಖ್ವಾಡ’ದಲ್ಲಿ ಇದನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.* ಆಯುಷ್ಮಾನ್‌ ಭವ ಎಂಬುದು ಆಯುಷ್ಮಾನ್‌ ಆಪ್ಕೆ ದ್ವಾರ 3.0 ಅನ್ನು ಒಳಗೊಂಡಿರುವ ಒಂದು ಅಭಿಯಾನವಾಗಿದ್ದು, ಇದು ಬಾಕಿರುವ ಆಯುಷ್ಮಾನ್‌ ಕಾರ್ಡ್‌ಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ವಿತರಿಸುವ ಗುರಿಯನ್ನು ಹೊಂದಿದೆ.* ಅಕ್ಟೋಬರ್ 2 ರಂದು ಕೊನೆಗೊಳ್ಳುವ ಪಖ್ವಾಡದ ಸಮಯದಲ್ಲಿ ಆರೋಗ್ಯದ ಲಭ್ಯತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಹಲವಾರು ಚಟುವಟಿಕೆಗಳನ್ನು ಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್  ಮಾಂಡವಿಯಾ ಅವರು ತಿಳಿಸಿದ್ದಾರೆ.* ಈ ಕಾರ್ಯಕ್ರಮದಡಿ ಶಿಬಿರಗಳನ್ನು ನಡೆಸಿ 60,000/- ಜನರಿಗೆ ಆಯುಷ್ಮಾನ್‌ ಭವ ಭರತ್ ಕಾರ್ಡ್ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಿಂದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ 'ಸೇವಾ ಪಖ್ವಾಡ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.