* ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಸಂಕೇತ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕಿವುಡರು ಮತ್ತು ಸಂಕೇತ ಭಾಷೆಯನ್ನು ಬಳಸುವ ಇತರ ಜನರ ಭಾಷಾ ಗುರುತನ್ನು ರಕ್ಷಿಸಲು ಅಂತರರಾಷ್ಟ್ರೀಯ ಸಂಜ್ಞಾ ಭಾಷೆಗಳ ದಿನವನ್ನು ಆಚರಿಸಲಾಗುತ್ತದೆ. *  ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಈ ನಿರ್ದಿಷ್ಟ ದಿನವನ್ನು ಅಂತರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಸ್ಮರಿಸಲು ನಿರ್ಧರಿಸಿತು.* 'ವರ್ಲ್ಡ್ ಫೆಡರೇಷನ್ ಆಫ್ ದಿ ಡೆಫ್' (WFD) ಕಿವುಡ ಜನರ 135 ರಾಷ್ಟ್ರೀಯ ಸಂಘಗಳ ಒಕ್ಕೂಟವಾಗಿದ್ದು,  ಫೆಡರೇಶನ್ ಪ್ರಪಂಚದಾದ್ಯಂತ ಸುಮಾರು 70 ಮಿಲಿಯನ್ ಕಿವುಡ ಜನರನ್ನು ಪ್ರತಿನಿಧಿಸುತ್ತದೆ.* ಕಿವಿ ಕೇಳದಿರುವವರ ಅಂತರರಾಷ್ಟ್ರೀಯ ವಾರದ ಭಾಗವಾಗಿ 2018 ರಲ್ಲಿ ಮೊದಲ ಅಂತರರಾಷ್ಟ್ರೀಯ ಸಂಕೇತ ಭಾಷೆಯ ದಿನವನ್ನು ಆಚರಿಸಲಾಗಿದ್ದು, ಇದು ಸೆಪ್ಟೆಂಬರ್ 1958 ರಲ್ಲಿ ಮೊದಲು ಆಚರಿಸಲಾಯ್ತು.* ಈ ವರ್ಷದ ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನದ ಥೀಮ್ "ಸಂಕೇತ ಭಾಷೆ ನಮ್ಮನ್ನು ಒಂದುಗೂಡಿಸು" ಅವರ ರಾಷ್ಟ್ರೀಯ ಸಂಕೇತ ಭಾಷೆಯಲ್ಲಿ.