* ದೆಹಲಿಯ ನಿಯೋಜಿತ ಮುಖ್ಯಮಂತ್ರಿ ಅತಿಶಿ ಅವರು ಸೆಪ್ಟೆಂಬರ್ 19 ರಂದು ಘೋಷಿಸಿದ ಆಮ್ ಆದ್ಮಿ ಪಕ್ಷದ (ಎಎಪಿ) ನಿರ್ಧಾರದ ನಂತರ ಸೆಪ್ಟೆಂಬರ್ 21 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.* ಅತಿಶಿ ಜತೆಗೆ ಇತರ ನಾಯಕರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆರಂಭದಲ್ಲಿ ಸೆಪ್ಟೆಂಬರ್ 26-27 ರಂದು ವಿಶೇಷ ಅಸೆಂಬ್ಲಿ ಅಧಿವೇಶನಕ್ಕೆ ನಿಗದಿಪಡಿಸಲಾಗಿತ್ತು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಪ್ರಸ್ತಾಪದ ಮೇರೆಗೆ ಪ್ರಮಾಣವಚನ ದಿನಾಂಕವನ್ನು ಬದಲಾಯಿಸಲಾಯಿತು.* ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸರಕಾರ ರಚಿಸಲು ಎಎಪಿ ಯೋಜಿಸಿದ್ದು, ಹೊಸ ಮಂತ್ರಿ ಮಂಡಲದಲ್ಲಿ ಅರವಿಂದ್ ಕೇಜ್ರಿವಾಲ್ ಸಂಪುಟದ ಎಲ್ಲಾ ಸಚಿವರನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.* ಸೌರಭ್ ಭಾರದ್ವಾಜ್, ಕೈಲಾಶ್ ಗಹ್ಲೋಟ್, ಗೋಪಾಲ್ ರೈ ಮತ್ತು ಇಮ್ರಾನ್ ಹುಸೇನ್-ಅತಿಶಿ ಅವರ ಸಂಪುಟದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕರೋಲ್ ಬಾಗ್ ಶಾಸಕ ವಿಶಾಲ್ ರವಿ ಮತ್ತು ಕೊಂಡ್ಲಿ ಶಾಸಕ ಕುಲದೀಪ್ ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.* ಶಿಕ್ಷಣ, ಕಂದಾಯ, ಹಣಕಾಸು, ಲೋಕೋಪಯೋಗಿ,ವಿದ್ಯುತ್ ಸೇರಿದಂತೆ ಕೇಜ್ರಿವಾಲ್ ಸರ್ಕಾರದಲ್ಲಿ 13 ಇಲಾಖೆಯನ್ನು ನಿರ್ವಹಿಸುತ್ತಿದ್ದರು.* ಆತಿಶಿ ಮುಖ್ಯಮಂತ್ರಿಯಾದ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕಾಗಿದೆ. ಸರಕಾರವು ಸೆ. 26 ಮತ್ತು 27ರಂದು ದಿಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತಯಾಚಿಸಲಿದೆ.