* ಪ್ರತಿವರ್ಷ ಸೆಪ್ಟೆಂಬರ್ 16 ರಂದು ಓಝೋನ್ ಪದರದ ಸಂರಕ್ಷಣೆ ಮತ್ತು ಸವಕಳಿ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.* ಓಝೋನ್ ಪದರವು ಸೂರ್ಯನಿಂದ ಹೊರಸೂಸುವ ನೇರಳಾತೀಕ ಕಿರಣಗಳನ್ನು ಹೀರಿಕೊಂಡು ಭೂಮಿಯಲ್ಲಿನ ಸಕಲ ಜೀವರಾಶಿಗಳನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. * ಡಿಸೆಂಬರ್, 1994 ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ - UNGA ಸೆಪ್ಟೆಂಬರ್ 16 ಅನ್ನು ವಿಶ್ವ ಓಝೋನ್ ದಿನವೆಂದು ಘೋಷಿಸಲಾಗಿದ್ದು, ಈ ಓಝೋನ್ ಪದರವನ್ನು 1913 ರಲ್ಲಿ ಪ್ರೆಂಚ್ ವಿಜ್ಞಾನಿಗಳಾದ ಚಾಲ್ಸ್ ಫೆಬ್ರಿ ಮತ್ತು ಹೆನ್ರಿ ಬ್ಯುಸೇನ್ ಅವರು ಕಂಡು ಹಿಡಿದರು.* ಓಝೋನ್ ಪದರವು ಭೂಮಿಯ ಮೇಲ್ಮೈಯಿಂದ 20 ರಿಂದ 30 ಕಿಮೀ ಎತ್ತರದಲ್ಲಿ ವಾತಾವರಣದ ವಾಯುಮಂಡಲದಲ್ಲಿ ಓಝೋನ್ ಅನಿಲದ ತೆಳುವಾದ ಪದರವಾಗಿದೆ. * ಓಜೋನ್ ಪದರ ಸರಿಪಡಿಸುವಿಕೆ ಕ್ರಮ ಕೈಗೊಳ್ಳುವುದು ಮತ್ತು ಹವಾಮಾನ ಬದಲಾವಣೆ ಕಡಿಮೆ ಮಾಡುವುದು ಈ ವರ್ಷದ ಧೈಯ ವಾಕ್ಯವಾಗಿದೆ.