Job Description: ➤ ಭಾರತೀಯ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (Securities and Exchange Board of India - SEBI) ಇತ್ತೀಚೆಗೆ ನಡೆದ ತನ್ನ ಆಡಳಿತ ಮಂಡಳಿ ಸಭೆಯಲ್ಲಿ ಭಾರತೀಯ ಹಣಕಾಸು ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಒಂದು ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದೆ. ಪರ್ಯಾಯ ಹೂಡಿಕೆ ನಿಧಿಗಳ (Alternative Investment Funds - AIF) ಯೋಜನೆಗಳನ್ನು ಶೀಘ್ರವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು 'ಗರುಡ' (GARUDA) ಎಂಬ ಹೊಸ 'ಗ್ರೀನ್ ಚಾನೆಲ್' (Green Channel) ವ್ಯವಸ್ಥೆಗೆ ಅನುಮೋದನೆ ನೀಡಿದೆ. ➤ GARUDA ಎಂದರೆ "Green-Channel: AIF Rollout Upon Document Acknowledgement" ಎಂದರ್ಥ. ಸರಳವಾಗಿ ಹೇಳುವುದಾದರೆ, ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿದ ತಕ್ಷಣವೇ ಡಿಜಿಟಲ್ ಮಾನ್ಯತೆಯ ಆಧಾರದ ಮೇಲೆ ಹೂಡಿಕೆ ಯೋಜನೆಗಳನ್ನು ವೇಗವಾಗಿ ಪ್ರಾರಂಭಿಸಲು ಸೆಬಿ ರೂಪಿಸಿರುವ ಸ್ವಯಂಚಾಲಿತ ವ್ಯವಸ್ಥೆಯಾಗಿದೆ. ಈ ಹಿಂದೆ ಮಲೇಷ್ಯಾ ದೇಶದ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಜಾರಿಯಲ್ಲಿದ್ದ 'ಲಾಡ್ಜ್ ಅಂಡ್ ಲಾಂಚ್' (Lodge-and-Launch) ಮಾದರಿಯನ್ನು ಆಧರಿಸಿ ಭಾರತದಲ್ಲಿ ಇದನ್ನು ತರಲಾಗಿದೆ. ➤ ಗರುಡ ಫ್ರೇಮ್‌ವರ್ಕ್‌ನ ಪ್ರಮುಖ ಮುಖ್ಯಾಂಶಗಳು: ಸಮಯದ ಉಳಿತಾಯ (Launch Timeline Reduced): ಈ ಹಿಂದೆ ಸಾಮಾನ್ಯ AIF ಯೋಜನೆಗಳನ್ನು ಮಾರುಕಟ್ಟೆಗೆ ತರಲು ಕನಿಷ್ಠ 30 ದಿನಗಳ ಕಾಲ ಕಾಯಬೇಕಾಗುತ್ತಿತ್ತು. ಆದರೆ ಹೊಸ ಗರುಡ ನಿಯಮಾವಳಿಗಳ ಅನ್ವಯ, ರೆಗ್ಯುಲರ್ AIF ಯೋಜನೆಗಳನ್ನು ಕೇವಲ 10 ಕೆಲಸದ ದಿನಗಳೊಳಗೆ (10 Working Days) ಪ್ರಾರಂಭಿಸಬಹುದು. ಏಂಜೆಲ್ ಫಂಡ್‌ಗಳಿಗೆ ತಕ್ಷಣದ ಅನುಮತಿ (Immediate Launch for Angel Funds): ಮಾನ್ಯತೆ ಪಡೆದ ಹೂಡಿಕೆದಾರರನ್ನು (Accredited Investors) ಮಾತ್ರ ಹೊಂದಿರುವ ಯೋಜನೆಗಳು ಮತ್ತು ಏಂಜೆಲ್ ಫಂಡ್‌ಗಳಿಗೆ (Angel Funds) ಸೆಬಿಯಿಂದ ನೋಂದಣಿ ಸಿಕ್ಕ ತಕ್ಷಣ ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ತಕ್ಷಣವೇ ಯಾವುದೇ ಕಾಯುವಿಕೆ ಇಲ್ಲದೆ ತಕ್ಷಣವೇ ಯೋಜನೆ ಲಾಂಚ್ ಮಾಡಲು ಅವಕಾಶ ನೀಡಲಾಗಿದೆ. ಮರ್ಚೆಂಟ್ ಬ್ಯಾಂಕರ್ ಕಡ್ಡಾಯದ ವಿನಾಯಿತಿ: ಮಾನ್ಯತೆ ಪಡೆದ ಹೂಡಿಕೆದಾರರ ಯೋಜನೆಗಳಿಗೆ ಇನ್ನು ಮುಂದೆ ಮರ್ಚೆಂಟ್ ಬ್ಯಾಂಕರ್ (Merchant Banker) ಮೂಲಕವೇ ಖಾಸಗಿ ಪ್ಲೇಸ್‌ಮೆಂಟ್ ಮೆಮೊರಾಂಡಮ್ (PPM) ಸಲ್ಲಿಸಬೇಕೆಂಬ ಕಡ್ಡಾಯ ನಿಯಮ ಇರುವುದಿಲ್ಲ. ಇದರಿಂದ ಹೂಡಿಕೆ ನಿಧಿಗಳ ನಿರ್ವಹಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಸ್ವಯಂ ದೃಢೀಕರಣ (Self-Certification): ಹೊಸ ನಿಯಮದಡಿ ಫಂಡ್ ಮ್ಯಾನೇಜರ್‌ಗಳು ಮತ್ತು ನಿಯೋಜಿತ ಅಧಿಕಾರಿಗಳು ನಿಯಮಾವಳಿಗಳ ಅನುಸರಣೆಯನ್ನು ತಾವೇ ಸ್ವಯಂ ದೃಢೀಕರಿಸಲು (Self-certify) ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆಡಳಿತಾತ್ಮಕ ವಿಳಂಬ ತಪ್ಪುತ್ತದೆ. ➤ AIF ಯೋಜನೆಗಳ ಹೊಸ ವರ್ಗೀಕರಣ: ಲಾರ್ಜ್ ವ್ಯಾಲ್ಯೂ ಫಂಡ್‌ಗಳು: ಇವುಗಳಲ್ಲಿ ಪ್ರತಿ ಹೂಡಿಕೆದಾರರು ಕನಿಷ್ಠ 25 ಕೋಟಿ ರೂ. ಹೂಡಿಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಅಕ್ರೆಡಿಟೆಡ್ ಇನ್ವೆಸ್ಟರ್-ಓನ್ಲಿ ಸ್ಕೀಮ್ಸ್: ಅತ್ಯಂತ ಅನುಭವಿ ಹಾಗೂ ಆರ್ಥಿಕವಾಗಿ ಬಲಿಷ್ಠ ಹೂಡಿಕೆದಾರರಿಗಾಗಿ ಇರುವ ಯೋಜನೆಗಳಿವು. ಏಂಜೆಲ್ ಫಂಡ್‌ಗಳು (Angel Funds): ನವೋದ್ಯಮಗಳಿಗೆ (Startups) ಆರಂಭಿಕ ಹಂತದಲ್ಲಿ ಬಂಡವಾಳ ಒದಗಿಸುವ ನಿಧಿಗಳು. ರೆಗ್ಯುಲರ್ ಸ್ಕೀಮ್ಸ್ (Regular Schemes): ಸಾಮಾನ್ಯ ಹೂಡಿಕೆದಾರರನ್ನು ಒಳಗೊಂಡ ಇತರ ಎಐಎಫ್ ಯೋಜನೆಗಳು.ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.