* ಜಗತ್ತಿನಾದ್ಯಂತ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನ ಆಚರಿಸಲಾಗುತ್ತದೆ. ಇದು 57ನೇ ಅಂತಾರಾಷ್ಟ್ರೀಯ ದಿನದ ಆಚರಣೆಯಾಗಿದೆ.    * ಎರಡನೇ ಮಹಾ ಯುದ್ಧದ ನಂತರ 1965 ರಲ್ಲಿ ಟೆಹ್ರಾನ್‌ನಲ್ಲಿ ನಡೆದ ಶಿಕ್ಷಣ ಮಂತ್ರಿಗಳ ವಿಶ್ವ ಸಮ್ಮೇಳನದ ಸದಸ್ಯರು ಯುವ ಜನರಲ್ಲಿ ಕಡಿಮೆ ಸಾಕ್ಷರತೆ ಪ್ರಮಾಣ ಮತ್ತು ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಆಗ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಯು (ಯುನಿಸ್ಕೊ) ಪ್ರತಿ ವರ್ಷ ಸೆ.8 ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಎಂದು ಘೋಷಿಸಿತು.* ಪ್ರತಿ ವರ್ಷ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಒಂದು ಥೀಮ್ ನಡಿಯಲ್ಲಿಆಚರಿಸಲಾಗುತ್ತದೆ, ಈ ವರ್ಷ 2023 ರ ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದಾದ್ಯಂತ 'ಪರಿವರ್ತನೆಯಲ್ಲಿರುವ ಜಗತ್ತಿಗೆ ಸಾಕ್ಷರತೆಯನ್ನು ಉತ್ತೇಜಿಸುವುದು : ಸುಸ್ಥಿರ ಮತ್ತು ಶಾಂತಿಯುತ ಸಮಾಜಗಳಿಗೆ ಅಡಿಪಾಯವನ್ನು ನಿರ್ಮಿಸುವುದು' ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗುತ್ತದೆ.* ಆಚರಣೆ ಉದ್ದೇಶ: ಬದುಕಲು ಆಹಾರ ಎಷ್ಟು ಮುಖ್ಯವೋ ಸಮಾಜದ ಓರೆಕೋರೆಗಳನ್ನು ತಿದ್ದಲು, ದೇಶ, ಸಮಾಜ ಮತ್ತು ಕುಟುಂಬದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ತಿಳಿವಳಿಕೆ ಅಗತ್ಯ, ಇದು ಬರುವುದು ಕಲಿಕೆ, ಶಿಕ್ಷಣದಿಂದ. ಇದನ್ನು ಮನದಲ್ಲಿಟ್ಟುಕೊಂಡು ವಿದ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.