* ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷ ವಯಸ್ಸಿನ ಖ್ಯಾತ ಉರ್ದು ಸಾಹಿತಿ, ಶಿಕ್ಷಣ ತಜ್ಞ ಶೇಖ್ ಅಬ್ದಲ್ ಸಲಾಮ್ ಅಬ್ದುರ್ ರಜಾಕ್ ಅವರು 'ಮುಂಬಯಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. * 2004ರಲ್ಲಿ ಉರ್ದು ಸಾಹಿತ್ಯಕ್ಕೆ ಅವರಿಗೆ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 1941ರಲ್ಲಿ ಒಡಿಶಾದ ರಾಯಗಡ ಜಿಲ್ಲೆಯ ಪನ್ವೇಲ್‌ನಲ್ಲಿ ಜನಿಸಿದ ಅಬ್ದುರ್ ರಜಾಕ್ ಇವರು ಜನರ ನೋವನ್ನು ತಮ್ಮ ಕತೆ-ಕವನಗಳ ಮೂಲಕ ಕಟ್ಟಿಕೊಡುತ್ತಿದ್ದರು. * ಅಬ್ದುರ್ ರಜಾಕ್ ಅವರು ರಚಿಸಿದ್ದ ಕಾದಂಬರಿಗಳನ್ನು 1970ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರ ಮಾಡಲಾಯಿತು. * ರಝಾಕ್ ಅವರು 2004 ರಲ್ಲಿ ತಮ್ಮ ಮೆಚ್ಚುಗೆ ಪಡೆದ ಸಣ್ಣ ಕಥೆಗಳ ಸಂಕಲನ ‘ಶಿಕಾಸ್ತ ಬಟನ್ ಕೆ ದಾರ್ಮಿಯಾನ್’ ಗಾಗಿ ಉರ್ದು ಸಾಹಿತ್ಯಕ್ಕಾಗಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.