* 'ಸಾಬರಮತಿ ನದಿಪಾತ್ರದಲ್ಲಿ ಅಭಿವೃದ್ಧಿ ಪಡಿಸಿರುವ ವಿಹಾರ ತಾಣವು ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿದೆ' ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಹೇಳಿದರು.* ವಿಡಿಯೊ ಕಾನ್ಸರನ್ಸ್ ಮೂಲಕ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಾಬರಮತಿಯ 'ಅಕ್ಷರ' ವಿಹಾರ ನೌಕೆಗೆ ಚಾಲನೆ ನೀಡಿದರು.* 'ಅಕ್ಷರ್' ನೌಕೆಯು ಎರಡು ಎಂಜಿನ್ ಒಳಗೊಂಡಿರುವ ನೌಕೆಯು ಒಟ್ಟು 30 ಮೀಟರ್ ಉದ್ದವಿದ್ದು, ಅಹಮದಾಬಾದ್ ನಲ್ಲಿ ಪ್ರವಾಸೋದ್ಯಮ ಪ್ರಗತಿಗೆ ಒತ್ತು ನೀಡುವ ನಿರೀಕ್ಷೆಯಿದೆ.* 'ಅಕ್ಷರ್' ನೌಕೆಯಲ್ಲಿ ಮನರಂಜನೆ, ತಿನಿಸು ಲಭ್ಯವಿದ್ದು, ಮತ್ತು 180 ಜೀವರಕ್ಷಕ ಕವಚಗಳು, ಅಗ್ನಿಶಮನ ವ್ಯವಸ್ಥೆ, ತುರ್ತು ರಕ್ಷಣಾ ದೋಣಿಯನ್ನು ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಳವಡಿಸಲಾಗಿದೆ ಎಂದು ತಿಳಿಸಿದರು.