➤ ಕೇಂದ್ರ ಗೃಹ ಸಚಿವಾಲಯವು 2007ರ ಬ್ಯಾಚ್‌ನ ಉತ್ತರ ಪ್ರದೇಶ ಕೆಡರ್‌ನ ಐಪಿಎಸ್ ಅಧಿಕಾರಿ ರವಿಶಂಕರ್ ಛಬ್ಬಿ ಅವರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಉಪ ಮಹಾನಿರೀಕ್ಷಕರಾಗಿ (DIG) ನೇಮಕ ಮಾಡಿದೆ. ಇವರು ಕೇಂದ್ರ ನಿಯೋಜನೆ (Central Deputation) ಅಡಿಯಲ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.ಜನವರಿ 19, 2026 ರಂದು ಕೇಂದ್ರ ಗೃಹ ಸಚಿವಾಲಯವು ಈ ನೇಮಕಾತಿಗೆ ಅನುಮೋದನೆ ನೀಡಿದೆ.➤ ರವಿಶಂಕರ್ ಛಬ್ಬಿ ಅವರು ಈ ಹಿಂದೆ ಮಹಿಳಾ ಪವರ್‌ಲೈನ್-1090 ರ ಮುಖ್ಯಸ್ಥರಾಗಿ, ಜೌನ್‌ಪುರದ ಎಸ್ಪಿಯಾಗಿ ಮತ್ತು ಕಾರಾಗೃಹ ಸುಧಾರಣಾ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.ಇವರು ಉತ್ತರ ಪ್ರದೇಶದ ಲಕ್ನೋದ ಡಿಜಿಪಿ ಪ್ರಧಾನ ಕಚೇರಿಯಲ್ಲಿ ಡಿಐಜಿ (ಸಾರ್ವಜನಿಕ ಕುಂದುಕೊರತೆ) ಆಗಿ ಕಾರ್ಯನಿರ್ವಹಿಸುತ್ತಿದ್ದರು. ➤ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF): CRPF ಭಾರತದ ಅತಿದೊಡ್ಡ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಾಗಿದೆ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ CRPF ಅನ್ನು 1939 ರಲ್ಲಿ 'ಕ್ರೌನ್ ರೆಪ್ರೆಸೆಂಟೇಟಿವ್ ಪೊಲೀಸ್' ಆಗಿ ಸ್ಥಾಪಿಸಲಾಯಿತು ಮತ್ತು 1949 ರ ಡಿಸೆಂಬರ್ 28 ರಂದು 'ಕೇಂದ್ರೀಯ ಮೀಸಲು ಪೊಲೀಸ್ ಪಡೆ' (CRPF) ಎಂದು ಮರುನಾಮಕರಣ ಮಾಡಲಾಯಿತು ➤ CRPF ನ ಪ್ರಮುಖ ಕಾರ್ಯಗಳು:-- ಆಂತರಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು.- ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ (Left Wing Extremism).- ಚುನಾವಣೆಗಳ ಸಂದರ್ಭದಲ್ಲಿ ಭದ್ರತೆ ಒದಗಿಸುವುದು.- ವಿವಿಐಪಿಗಳ ರಕ್ಷಣೆ ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಕ್ಷಣಾ ಕಾರ್ಯ.➤ ಪ್ರತಿ ವರ್ಷ ಅಕ್ಟೋಬರ್ 21 ರಂದು 1959ರಲ್ಲಿ ಲಡಾಖ್‌ನಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮರಾದ CRPF ಯೋಧರ ನೆನಪಿಗಾಗಿ 'ಪೊಲೀಸ್ ಸಂಸ್ಮರಣಾ ದಿನ'ವನ್ನು ಆಚರಿಸಲಾಗುತ್ತದೆ.