* ರಷ್ಯಾ ಸೈನ್ಯಕ್ಕೆ ಸಹಾಯಕ ಸಿಬ್ಬಂದಿಯಾಗಿ ಭಾರತೀಯ ನೇಮಕಾತಿಯನ್ನು ಕೊನೆಗೊಳಿಸುವ ಮತ್ತು ಈಗಾಗಲೇ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಬಿಡುಗಡೆಗೊಳಿಸುವ ಭಾರತದ ಮನವಿಗೆ ರಷ್ಯಾ ಸಮ್ಮತಿಸಿದೆ.* ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. * ಕಳೆದ ತಿಂಗಳು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ರಷ್ಯಾ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಭಾರತೀಯರು ಮೃತಪಟ್ಟಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡ ಭಾರತೀಯ ವಿದೇಶಾಂಗ ಇಲಾಖೆ, ಸೈನ್ಯಕ್ಕೆ ಭಾರತೀಯರ ನೇಮಕಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹೇಳಿತ್ತು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಷ್ಯಾಕ್ಕೆ ಒತ್ತಾಯಿಸಿತ್ತು.* ಔತಣಕೂಟದಲ್ಲಿ ಪುಟಿನ್ ಅವರು 3 ಬಾರಿಗೆ ಪ್ರಧಾನಿಯಾಗಿ ಪುನರಾಯ್ಕೆಯಾಗಿರುವ ಮೋದಿಯವರನ್ನು ಅಭಿನಂದಿಸಿದರು. ಭಾರತದ ಆರ್ಥಿಕತೆಯ ಏರುತ್ತಿರುವ ಸ್ಥಾನಮಾನದ ಬಗ್ಗೆ ಚರ್ಚಿಸಿದ್ದಾರೆ.