* ಅಮೆರಿಕದ ರಕ್ಷಣಾ ಇಲಾಖೆಯು ಭಾರತ ಮತ್ತು ಅಮೆರಿಕಾದ ಮಧ್ಯೆ ಇರುವ 'ರಕ್ಷಣಾ ಸಹಭಾಗಿತ್ವ ವಿಚಾರದಲ್ಲಿ ದೇಶವು ಭಾರತದೊಂದಿಗೆ ಹೊಂದಿರುವ ಪಾಲುದಾರಿಕೆಗೆ ಮಹತ್ವ ಇದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಬಲವಾದ ಪಾಲುದಾರಿಕೆ ಮುಂದುವರಿಯಲಿದೆ' ಎಂದು ತಿಳಿಸಿದೆ.* ಅಮೆರಿಕದ ರಕ್ಷಣಾ ಇಲಾಖೆಯು '1997ರಲ್ಲಿ ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ವ್ಯಾಪಾರವು ಬಹುತೇಕ ನಗಣ್ಯವಾಗಿತ್ತು. ಇಂದು ಅದು 11.66 ಲಕ್ಷ ಕೋಟಿಗೂ (20 ಶತಕೋಟಿ ಡಾಲರ್) ಹೆಚ್ಚಾಗಿದೆ' ಎಂದು ತಿಳಿಸಿದರು.* 'ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತ್ವ ಗೌರವಿಸುವ, ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ಮೂಲಕ ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಂಡು ಬರಲಾಗಿದೆ. ಈ ವಿಷಯದಲ್ಲಿ ಭಾರತ ಮತ್ತು ಇತರ ದೇಶಗಳೊಂದಿಗೆ ನಾವು ಹೊಂದಿರುವ ಪಾಲುದಾರಿಕೆಯನ್ನು ಗೌರವಿಸುತ್ತೇವೆ' ಎಂದು ತಿಳಿಸಿದರು.