* ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗಾಗಿ ಒಟ್ಟು 463 ಸ್ಥಳೀಯವಾಗಿ ತಯಾರಿಸಿದ 12.7 ಎಂಎಂ ಸ್ಥಿರೀಕೃತ ರಿಮೋಟ್ ಕಂಟ್ರೋಲ್ ಗನ್‌ಗಳ (ಎಸ್‌ಆರ್‌ಸಿಜಿ) ತಯಾರಿಕೆ ಮತ್ತು ಪೂರೈಕೆಗಾಗಿ ರಕ್ಷಣಾ ಸಚಿವಾಲಯವು ಕಾನ್ಪುರದ ಅಡ್ವಾನ್ಸ್‌ಡ್ ವೆಪನ್ ಇಕ್ವಿಪ್‌ಮೆಂಟ್ ಇಂಡಿಯಾ ಲಿಮಿಟೆಡ್ (AWEIL) ನೊಂದಿಗೆ ಒಟ್ಟು ₹1752.13 ಕೋಟಿ ವೆಚ್ಚ ಒಪ್ಪಂದಕ್ಕೆ ಸಹಿ ಹಾಕಿದೆ. * ಈ ಬಂದೂಕುಗಳಿಂದ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗೆ ಮತ್ತಷ್ಟು ಬಲ ಸಿಗಲಿದೆ. ಹಗಲು ಮತ್ತು ರಾತ್ರಿ ವೇಳೆ ಹಡಗುಗಳಿಗೆ ಸಮುದ್ರ ಮಾರ್ಗದಲ್ಲಿ ಕಡಲ್ಗಳ್ಳರಿಂದ ಎದುರಾಗಲಿರುವ ಅಪಾಯಗಳನ್ನು ನಿಖರವಾಗಿ ಹತ್ತಿಕ್ಕಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ.