* ಕ್ರೆಡಿಟ್ ಕಾರ್ಡ್ ಗಳ ವಿತರಣೆಗೆ ಸಂಬಂಧಿಸಿದಂತೆ ಕಾರ್ಡ್ ನೀಡುವ ಬ್ಯಾಂಕ್‌ ಹಾಗೂ ಬ್ಯಾಂಕೇತರ ಹಣಕಾಸು ಕಂಪನಿ(ಎನ್‌ಬಿಎಫ್‌ಸಿ )ಗಳಿಗೆ  ಆರ್‌ಬಿಐ ಕ್ರೆಡಿಟ್ ಕಾರ್ಡ್ ನೆಟ್‌ವರ್ಕ್‌ ಮಾರ್ಚ್ 6 ರಂದು  ಹೊಸ ಮಾರ್ಗಸೂಚಿಗಳನ್ನುಪ್ರಕಟಿಸಲಾಗಿದೆ.* ಕ್ರೆಡಿಟ್ ಅಥವಾ ಡೆಬಿಟ್  ಕಾರ್ಡ್ ಗಳನ್ನೂ ವಿತರಿಸುವ ವೇಳೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್‌ವರ್ಕ್‌ಗಳ ಆಯ್ಕೆಯನ್ನು ನೀಡುವುದು ಕಡ್ಡಾಯವಾಗಿದೆ.  * ಹಳೆಯ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಾರ್ಡ್ ಅನ್ನು ಅಪ್‌ಡೇಟ್‌ ಮಾಡುವಾಗ ಕಾರ್ಡ್ ನೆಟ್‌ವರ್ಕ್ ಅನ್ನು ಬದಲಾಯಿಸುವ ಅವಕಾಶ ಇದೆ. ಪ್ರಸ್ತುತ ನೆಟ್ ವರ್ಕ್ ಗಳು ಮತ್ತು ಕಾರ್ಡ್ ವಿತರಕರ ನಡುವೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಗ್ರಾಹಕರಿಗೆ ಆಯ್ಕೆಯ ಅವಕಾಶ ಕಲ್ಪಿಸುವುದಿಲ್ಲ.  * 10 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯ ಕಾರ್ಡ್‌ಗಳನ್ನು ವಿತರಿಸಿದ ಸಂಸ್ಥೆಗಳಿಗೆ ಹೊಸಮಾರ್ಗಸೂಚಿಯು ಅನ್ವಯಿಸುವುದಿಲ್ಲ. *  ಭಾರತ ದೇಶದಲ್ಲಿ ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪೊರೇಷನ್, ಡೈನರ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಲಿಮಿಟೆಡ್, ಮಾಸ್ಟರ್‌ಕಾರ್ಡ್ ಏಷ್ಯಾ ಫೆಸಿಪಿಕ್ ಲಿಮಿಟೆಡ್, ರಾಷ್ಟ್ರೀಯ ಪಾವತಿಗಳ ನಿಗಮದ (ಎನ್‌ಪಿಸಿಐ) ರುಪೇ ಹಾಗೂ ವೀಸಾ ವರ್ಲ್ಡ್‌ ವೈಡ್ ಕಂಪನಿಯನ್ನು ಕಾರ್ಡ್ ನೆಟ್‌ವರ್ಕ್‌ಗಳೆಂದು ಭಾರತೀಯ ರಿಸರ್ವ್ ಬ್ಯಾಂಕ್   ಅಧಿಕೃತಗೊಳಿಸಿದೆ.* ಭಾರತ ದೇಶದಲ್ಲಿ 2023ರ ಡಿಸೆಂಬರ್‌ವರೆಗೆ 9.79 ಕೋಟಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ) ಅಂಕಿಅಂಶಗಳನ್ನು ತಿಳಿಸಿದೆ.* ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಎಕ್ಸಿಸ್ ಬ್ಯಾಂಕ್ ಗಳು ಶೇ  70 ರಷ್ಟು ಕಾರ್ಡ್ ಗಳನ್ನೂ ವಿತರಿಸಿವೆ ಎಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿ ಕಾರ್ಡ್ ವಿತರಿಸಿರುವ ಮುಂಚೂಣಿಯಲ್ಲಿದೆ ಎಸ್‌ಬಿಐ 1.84 ಕೋಟಿ ಕಾರ್ಡ್‌ಗಳನ್ನು ವಿತರಿಸಿದೆ.