* ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಐಆರ್‌ಎಂಎಸ್‌) ಅಧಿಕಾರಿ ಸತೀಶ್‌ ಕುಮಾರ್‌ ಅವರನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಆಗಿ ಆಗಸ್ಟ್ 27 ರಂದು (ಮಂಗಳವಾರ) ನೇಮಕ ಮಾಡಲಾಗಿದೆ. * ಹಾಲಿ ಅಧ್ಯಕ್ಷರಾಗಿರುವ ಜಯ ವರ್ಮಾ ಸಿನ್ಹಾ ಅವರು ಆಗಸ್ಟ್‌ 31 ರಂದು ನಿವೃತ್ತಿಯಾಗಲಿದ್ದು, ಸತೀಶ್‌ ಕುಮಾರ್‌ ಅವರ ನೇಮಕವು ಸೆಪ್ಟೆಂಬರ್‌ 1ರಿಂದ ಜಾರಿಗೆ ಬರಲಿದೆ. * ಭಾರತೀಯ ರೈಲ್ವೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಜಯ ವರ್ಮ ಸಿನ್ಹಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಸತೀಶ್ ಕುಮಾರ್ ಅವರು ಮಂಡಳಿಯ ಉನ್ನತ ಹುದ್ದೆಗೆ ಆಯ್ಕೆಯಾದ ಪರಿಶಿಷ್ಟ ಜಾತಿ ಸಮುದಾಯದ ಮೊದಲ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ.* ರೈಲ್ವೆ ಮಂಡಳಿ "ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಅವರ ನೇಮಕಾತಿಯು ಅಪೆಕ್ಸ್ ಪೇ ಸ್ಕೇಲ್‌ನಲ್ಲಿದೆ (7 ನೇ ಕೇಂದ್ರ ವೇತನ ಆಯೋಗದ ಪ್ರಕಾರ ವೇತನ ಮಟ್ಟ 17).