* 2024 ರ ಅಂತ್ಯದೊಳಗೆ ದೇಶದ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮುಂದಾಗಿದ್ದು, ಭಾರತದಲ್ಲಿ ವೈದ್ಯ ವೃತ್ತಿಯನ್ನು ಕೇಂದ್ರೀಕೃತಗೊಳಿಸುವುದು ಆಯೋಗದ ಉದ್ದೇಶವಾಗಿದೆ.* ರಾಷ್ಟ್ರೀಯ ವೈದ್ಯಕೀಯ ನೋಂದಣಿ (NMC) ಯ ಹೊಸ ಅಧಿಸೂಚನೆಯ ಪ್ರಕಾರ, ದೇಶದ ಎಲ್ಲಾ ನೋಂದಾಯಿತ ವೈದ್ಯಕೀಯ ವೈದ್ಯರಿಗೆ ಸಾಮಾನ್ಯ ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್ ಇರುತ್ತದೆ. ಎನ್‌ಎಂಸಿ ಅಡಿಯಲ್ಲಿ ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್ (ಇಎಂಆರ್‌ಬಿ) ಇದನ್ನು ನಿರ್ವಹಿಸುತ್ತದೆ. * 2024ರ ಅಂತ್ಯದ ವೇಳೆಗೆ ಎಲ್ಲಾ ವೈದ್ಯರಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುವುದು ಎಂದು ಆಯೋಗದ ನೀತಿ ನಿಯಮಗಳ ಮತ್ತು ರಾಷ್ಟ್ರೀಯ ವೈದ್ಯಕೀಯ ನೋಂದಣಿ ಮಂಡಳಿ ಸದಸ್ಯ ಡಾ. ಯೋಗೇಂದ್ರ ಮಲಿಕ್ ಅವರು ತಿಳಿಸಿದ್ದಾರೆ.* ಪ್ರಸ್ತುತ ಸುಮಾರು 14 ಲಕ್ಷ ವೈದ್ಯರು IMR ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅವರ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ವೈದ್ಯಕೀಯ ನೋಂದಣಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.