* ಭಾರತೀಯ ಪಾರ್ಸ್‌ಪೋರ್ಟ್‌ ಹೊಂದಿರುವ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಶ್ರೀಲಂಕಾ ಸರಕಾರ ಅನುಮತಿ ನೀಡಿದ  ಹಾಗೆ ಥೈಲ್ಯಾಂಡ್ ಸರಕಾರವು ಕೂಡಾ ಭಾರತೀಯರಿಗೆ  ಮತ್ತು ತೈವಾನ್ ಪ್ರಜೆಗಳಿಗೆ ವೀಸಾ ಮುಕ್ತವಾಗಿ ಪ್ರವೇಶಿಸಲು ಒಪ್ಪಿಗೆ ನೀಡಿದೆ. * 30 ದಿನಗಳ ಕಾಲ ಥೈಲ್ಯಾಂಡ್ ದೇಶದಲ್ಲೇ ಉಳಿದುಕೊಳ್ಳುವ ಅವಕಾಶವೂ ಇದೆ. ಥೈಲ್ಯಾಂಡ್ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಈ ಒಂದು ಅವಕಾಶವನ್ನು ಭಾರತೀಯರಿಗೆ ನೀಡಿದೆ.* ಭಾರತೀಯರು ಥೈಲ್ಯಾಂಡ್ ಪ್ರವಾಸವನ್ನು ನವೆಂಬರ್ 1 ರಿಂದ ಮುಂದಿನ ಆರು ತಿಂಗಳವರೆಗೆ ವೀಸಾ ರಹಿತವಾಗಿ ಥೈಲ್ಯಾಂಡ್ ಪ್ರವಾಸ ಕೈಗೊಳ್ಳಬಹುದಾಗಿದೆ. * ಥೈಲ್ಯಾಂಡ್ ದೇಶಕ್ಕೆ ಕೊರೊನಾ ಸಾಂಕ್ರಾಮಿಕದಿಂದ ದೇಶದ ಆರ್ಥಿಕ ಸ್ಥಿತಿಗೆ ಮತ್ತು ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ. ಈ ನಿಟ್ಟಿನಲ್ಲಿ ಥೈಲ್ಯಾಂಡ್ ತನ್ನ ಆರ್ಥಿಕ ಸ್ಥಿತಿಯನ್ನು ಪುನಶ್ವೇತನ ಮಾಡುವ ಸಲುವಾಗಿ ಭಾರತೀಯರಿಗೆ ಹಾಗೂ ತೈವಾನ್ ದೇಶಕ್ಕೆ ವೀಸಾ ರಹಿತ ಪ್ರಯಾಣದ ಅನುಕೂಲವನ್ನು ಕಲ್ಪಿಸಿದೆ.* ಇತ್ತೀಚೆಗೆ ಶ್ರೀಲಂಕಾ ಕೂಡಾ ಭಾರತೀಯರಿಗೆ ಈ ರೀತಿಯ ಅವಕಾಶ ನೀಡಿತ್ತು. ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ 7 ದೇಶಗಳ ಪ್ರಜೆಗಳು ಶ್ರೀಲಂಕಾಗೆ ವೀಸಾ ಇಲ್ಲದೆ ಪ್ರವೇಶ ಪಡೆಯುವ ಅವಕಾಶ ಕಲ್ಪಿಸಿತ್ತು. ಈ ಯೋಜನೆಯನ್ನು 2024ರ ಮಾರ್ಚ್ 31ರವರೆಗೆ ಶ್ರೀಲಂಕಾ ಸರ್ಕಾರ ಕಲ್ಪಿಸಿದೆ.