* ತಮಿಳುನಾಡಿನ ನಂಜರಾಯನ್‌ ಪಕ್ಷಿಧಾಮ, ಕಾಜುವೇಲಿ ಪಕ್ಷಿಧಾಮ ಹಾಗೂ ಮಧ್ಯಪ್ರದೇಶದ ತಾವಾ ಸಂರಕ್ಷಿತ ಪ್ರದೇಶವನ್ನು ರಾಮ್ಸರ್ ವಿಶ್ವಮಾನ್ಯತೆಯ ಚೌಗುಭೂಮಿಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.* ಈ ಮೂಲಕ ಭಾರತದಲ್ಲಿ 85 ರಾಮ್ರರ್ ವಿಶ್ವಮಾನ್ಯತೆಯ ಚೌಗುಭೂಮಿ ಪ್ರದೇಶಗಳಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ ಅವರು ತಿಳಿಸಿದರು.* ಭಾರತದಲ್ಲಿ 10.36 ಲಕ್ಷ ಹೆಕ್ಟ‌ರ್ ವ್ಯಾಪ್ತಿಯ ರಾಮ್ಸರ್ ಚೌಗುಭೂಮಿ ಇದೆ. ಭಾರತದಲ್ಲಿ ತಮಿಳುನಾಡು (18) ಅತಿ ಹೆಚ್ಚು ಚೌಗುಭೂಮಿಗಳನ್ನು ಹೊಂದಿದ್ದು ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (10) ಇದೆ.- ಭಾರತದ ಮೂರು ಹೊಸ ತಾಣಗಳು ರಾಮ್‌ಸರ್ ಚೌಗುಭೂಮಿ ಪಟ್ಟಿಗೆ ಸೇರ್ಪಡೆ: 1. ನಂಜರಾಯನ್ ಪಕ್ಷಿಧಾಮ - ತಮಿಳುನಾಡು 2. ಕಜುವೇಲಿ ಪಕ್ಷಿಧಾಮ - ತಮಿಳುನಾಡು 3. ತವಾ ಜಲಾಶಯ - ಮಧ್ಯಪ್ರದೇಶ