* ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಲು ಆರಂಭಿಸಿರುವ ಪ್ರಯಾಸ್ (ಪ್ರಮೋಷನ್ ಆಫ್ ರಿಸರ್ಚ್ ಆ್ಯಟಿಟ್ಯೂಡ್ ಇನ್ ಯಂಗ್ ಆ್ಯಂಡ್ ಅಸ್ಪೈರಿಂಗ್ ಸ್ಟುಡೆಂಟ್ಸ್)ಗೆ ರಾಜ್ಯದ 17 ಶಾಲೆಗಳ ಪ್ರಾಜೆಕ್ಟ್ ಗಳು ಆಯ್ಕೆಯಾಗಿವೆ.* ಕಳೆದ ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್ ಗಳನ್ನು ಆಹ್ವಾನಿಸಲಾಗಿತ್ತು. ದೇಶಾದ್ಯಂತ 400ಕ್ಕೂ ಅಧಿಕ ಪ್ರಾಜೆಕ್ಟ್‌ಗಳನ್ನು ಸಂಶೋಧನೆಗೆ ಅಂಗೀಕರಿಸಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಮಾಹಿತಿ ನೀಡಿದೆ.ಯೋಜನೆ ಮತ್ತು ಶಾಲೆಯ ಹೆಸರು ಇಂತಿವೆ :-• ಅರೆಕಾ ಎಕೋ ಪಾಟ್- ಪಿಎಂಶ್ರೀ ಕೆವಿ ಮಲ್ಲೇಶ್ವರ ಬೆಂಗಳೂರು • ಮೆಟಾಮೆಟಿರಿಯಲ್ ಡ್ರಿವನ್ ಇನ್ನೋವೇಷನ್ ಇನ್ ಸ್ಪೇಸ್ ಪ್ರೊಪಲ್ಯನ್ ಸಿಸ್ಟಮ್-ಪಿಎಂಶ್ರೀ ಕೆವಿ - 3, ಮಚ್ಚೆ ಬೆಳಗಾವಿ•  ಕರಾವಳಿ ಕರ್ನಾಟಕದ ಆರೋಗ್ಯಕರ, ಸಾಂಪ್ರದಾಯಿಕ ಆಹಾರ ಪದ್ಧತಿ- ಪಿಎಂಶ್ರೀ ಕೆವಿ-1 ಜಾಲಹಳ್ಳಿ- ಬೆಂಗಳೂರು• ಗೃಹಜ್ಯೋತಿ ಯೋಜನೆ ಬಳಿಕ ವಿದ್ಯುತ್ ಬಳಕೆ ಸಮೀಕ್ಷೆ- ಎಎಸ್‌ಸಿ ಸೆಂಟರ್ ಕೆವಿ- ಬೆಂಗಳೂರು• ಸಂಚಾರ ನಿಯಮ ಉಲ್ಲಂಘನೆ ತಡೆ- ಎಂಜಿ ಕೆವಿ (ರೈಲ್ವೆ)• ಬೆಂಗಳೂರು ಆಹಾರ ಗುಣಮಟ್ಟ ಮತ್ತು ಖಾತ್ರಿ- ಪಿಎಂಶ್ರೀ ಕೆವಿ- ಮೈಸೂರು- ಮೈಸೂರು• ರಾಸಾಯನಿಕ ಬಣ್ಣಗಳ ಬದಲಿಗೆ ಆಲ್ಗೆ ಆಧಾರಿತ ಪರಿಸರಸ್ನೇಹಿ ಬಣ್ಣಗಳ ತಯಾರಿಕೆ- ಪಿಎಂಶ್ರೀ ಕೆವಿ- ಚಾಮರಾಜನಗರ- ಚಾಮರಾಜನಗರ• ಲೈ-ಫೈ- ಪ್ರೊಟೋಟೈಪ್- ಪಿಎಂ ಶ್ರೀ ಕೆವಿ ಕೊಪ್ಪಳ-ಕೊಪ್ಪಳ • ತಂತ್ರಜ್ಞಾನದ ಮೂಲಕ ರೈತರ ಸಬಲೀಕರಣ- ಆಗೋಸಂಗಮ್- ಡಿಆರ್‌ಡಿಒ ಕೆವಿ- ಬೆಂಗಳೂರು• ರಾಸಾಯನಿಕ ಪ್ರತಿಸ್ಪಂದನೆಗಳನ್ನು ಜೀವ ರಕ್ಷಕ ಘಟಕಗಳಾಗಿ ಮಾರ್ಪಾಡು- ಶಾರದಾಶ್ರೀ ಪಬ್ಲಿಕ್ ಸ್ಕೂಲ್ - ಪುಷ್ಪಗಿರಿನಗರ- ಬೆಂಗಳೂರು• ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ಉತ್ಪಾದನೆ- ಚನ್ನಬಸವೇಶ್ವರ ಗುರುಕುಲ ಕಂದ್ಯಾಲ, ಭಾಲ್ಕಿ- ಬೀದರ್ • ದೇವಸ್ಥಾನಗಳ ಪಬ್ಲಿಕ್ ಸ್ಕೂಲ್- ಬೆಂಗಳೂರು ಸಿಹಿನೀರಿನ ಮೀನುಗಾರಿಕಾ ಹೊಂಡಗಳಲ್ಲಿ ಭಾರ ಲೋಹಗಳ ವಿಶ್ಲೇಷಣೆ- ಕೆವಿ 2 ಮಂಗಳೂರು- ದಕ್ಷಿಣಕನ್ನಡ• ಕಾಡ್ಗಿಚ್ಚಿನಿಂದ ಕಾಡನ್ನು ರಕ್ಷಿಸುವ ಸ್ವಯಂಚಾಲಿತ ಸಾಧನ- ರಾಷ್ಟ್ರ ಪ್ರಗತಿ ಅನುದಾನಿತ ಶಾಲೆ- ಪಾವಗಡ-ತುಮಕೂರು• ಸಮುದಾಯದ ಪ್ಲೇ ಅಭಿವೃದ್ಧಿಗೆ ತಂತ್ರಜ್ಞಾನ ಬಳಕೆ- ಸರ್ಕಾರಿ ಹೈಸ್ಕೂಲ್ ಚಿತ್ರದುರ್ಗ- ಚಿತ್ರದುರ್ಗ• ಮಂಜಿನಿಂದ ನೀರನ್ನು ಸಂಗ್ರಹಿಸುವ ವಿಧಾನ- ಕೆವಿ ಸಿಆರ್‌ಪಿಎಫ್ ಯಲಹಂಕ- ಬೆಂಗಳೂರು• ವಾಯು ಮಾಲಿನ್ಯಕ್ಕೆ ಕಾರಣವಾಗುವ 3- ಇಂಗಾಲವನ್ನು ಗಾಳಿಯಿಂದ ಬೇರ್ಪಡಿಸುವುದು-ಕೇಂದ್ರೀಯ ವಿದ್ಯಾಲಯ, ಚಿಕ್ಕಮಗಳೂರು.* ಪ್ರಯಾಸ ಯೋಜನೆಯು 9ರಿಂದ 11ನೇ ತರಗತಿ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಯೋಜನೆಯಾಗಿದೆ. ವಿದ್ಯಾರ್ಥಿಗಳು ಯೋಜನೆಯ ಪ್ರಸ್ತಾವನೆಯೊಂದನ್ನು ಕಳುಹಿಸಬೇಕಾಗುತ್ತದೆ. ಪ್ರಾಜೆಕ್ಟ್ ಅಂಗೀಕಾರವಾದಲ್ಲಿ ಸಂಶೋಧನೆಯ ವಿವಿಧ ಆಯಾಮಗಳನ್ನು ವರ್ಷವಿಡೀ ಅಧ್ಯಯನ ಮಾಡಬಹುದು.* ಆಯ್ಕೆಯಾದ ಪ್ರಾಜೆಕ್ಟ್‌ಗಳಿಗೆ ಒಟ್ಟು 50 ಸಾವಿರ ರೂ. ನೀಡಲಾಗುತ್ತದೆ. ಆರಂಭದಲ್ಲಿ ಶೇ.50 ಹಾಗೂ ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕ ಉಳಿದ ಹಣವನ್ನು ಪಾವತಿಸಲಾಗುತ್ತದೆ.