* ಖ್ಯಾತ ಆಲ್ಬಂ ಗಾಯಕಿ ಚಾರ್ಲಿ ಎಕ್ಸ್‌ಸಿಎಕ್ಸ್‌ ಅವರ ಜನಪ್ರಿಯ ಮ್ಯೂಸಿಕ್‌ ಆಲ್ಬಂನಲ್ಲಿ ಬಳಕೆ ಮಾಡಲಾಗಿರುವ “ಬ್ರಾಟ್‌’ ಎಂಬ ಪದವನ್ನು ಕೊಲಿನ್ಸ್‌ ಡಿಕ್ಷನರಿ “2024ನೇ ವರ್ಷದ ಪದ" ಎಂದು ಆಯ್ಕೆ ಮಾಡಿದೆ.* ಸಾಮಾನ್ಯವಾಗಿ “ಬ್ರಾಟ್‌" (Brat) ಪದ 'ಅವಿಧೇಯತೆ' ಎಂಬ ಅರ್ಥವನ್ನು ಸೂಚಿಸುತ್ತದೆ. ಕಾಲಿನ್ ನಿಘಂಟು ಬ್ರಾಟ್ ಅನ್ನು ನಾಮಪದವಾಗಿ ಬಳಸಿದಾಗ "ಒಂದು ಮಗು, ವಿಶೇಷವಾಗಿ ಕೆಟ್ಟ ನಡವಳಿಕೆ ಅಥವಾ ಅಶಿಸ್ತಿನ ವ್ಯಕ್ತಿ" ಎಂದು ವ್ಯಾಖ್ಯಾನಿಸುತ್ತದೆ.* ನಿಘಂಟಿನಲ್ಲಿ "ಬ್ರಾಟ್" ಎಂಬ ವಿಶೇಷಣವನ್ನು "ಆತ್ಮವಿಶ್ವಾಸ, ಸ್ವತಂತ್ರ ಮತ್ತು ಸುಖಭೋಗದ ಮನೋಭಾವದಿಂದ ನಿರೂಪಿಸಲಾಗಿದೆ" [“characterized by a confident, independent, and hedonistic attitude.”] ಎಂದು ವ್ಯಾಖ್ಯಾನಿಸುತ್ತದೆ.* ಯುಎಸ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಬೆಂಬಲಿಗರು ಅಳವಡಿಸಿಕೊಂಡ ಪದವನ್ನು ಕಾಲಿನ್ಸ್ ವರ್ಡ್ ಆಫ್ ದಿ ಇಯರ್ 2024 ಎಂದು ಹೆಸರಿಸಲಾಯಿತು.