* ರಾಜ್ಯ ಸರ್ಕಾರ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ 9,651 ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ಪತ್ರ ನೀಡಲಾಗಿದೆ' ಎಂದು ಕೌಶಲಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.* ಉದ್ಯೋಗ ಮೇಳದಲ್ಲಿ 86,451 ಉದ್ಯೋಗಾಕಾಂಕ್ಷಿಗಳಿದ್ದು, ಸ್ಥಳದಲ್ಲೇ 9,651 ಮಂದಿ ಮಾತ್ರ ನೇಮಕಗೊಂಡಿದ್ದಾರೆ. ಉಳಿದ 15,461 ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿದ್ದು, ಅವರಿಗೂ ಉದ್ಯೋಗ ದೊರೆಯಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.* ' ಬೆಂಗಳೂರು ರಾಜಧಾನಿಯ ಅರಮನೆ ಮೈದಾನದಲ್ಲಿ ನಡೆದ ಮೇಳಕ್ಕೆ 53,913 ಪುರುಷರು, 32,494 ಮಹಿಳೆಯರು ಹಾಗೂ 42 ಇತರೆ ಸೇರಿ ಒಟ್ಟು 86,451 ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. * ಅವರಲ್ಲಿ 44,527 ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ಹಾಜರಾಗಿದ್ದು, 16,865 ಉದ್ಯೋಗಾಕಾಂಕ್ಷಿಗಳ ಅರ್ಜಿಗಳು ಪರಿಶೀಲನೆಯಲ್ಲಿವೆ, 2,457 ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ.* ವಲಯವಾರು ನೇಮಕಾತಿಯನ್ನು ನೀಡಿದ ಸಚಿವರು ವಿಮಾನಯಾನ ವಲಯದಲ್ಲಿ 26, ಆಟೋಮೋಟಿವ್ 74, ಎಲೆಕ್ಟ್ರಾನಿಕ್ಸ್ 29, ಆರೋಗ್ಯ 27, ಟೆಲಿಕಾಂ 19, ಸೇವಾ ವಲಯ 36, ಕೃಷಿ 6, ಗಾರ್ಮೆಂಟ್ 6, ಬ್ಯೂಟಿ 3, ಟೆಲಿಕಾಂ 19 ಮತ್ತು ಜವಳಿ 1 ನೇಮಕಾತಿಯಾಗಿದೆ ಎಂದು ತಿಳಿಸಿದರು.