* ಕೇಂದ್ರ ಆರೋಗ್ಯ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ ರವರು ಜೂನ್ 7 ರಂದು (ಬುಧವಾರ) ನವದೆಹಲಿಯಲ್ಲಿ ಐದನೇ ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ.* ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕ ಬಿಡುಗಡೆಯ ರಾಜ್ಯ ವಿಭಾಗದಲ್ಲಿ ಕೇರಳ, ಪಂಜಾಬ್ ಮತ್ತು ತಮಿಳುನಾಡು ಮತ್ತು ಸಣ್ಣ ರಾಜ್ಯಗಳ ವಿಭಾಗದಲ್ಲಿ ಗೋವಾ, ಮಣಿಪುರ ಮತ್ತು ಸಿಕ್ಕಿಂ ಪ್ರಶಸ್ತಿ ಪಡೆದುಕೊಂಡಿದ್ದು, ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ, ಚಂಡೀಗಢ ಮತ್ತು ದೆಹಲಿ ಪ್ರಶಸ್ತಿಗಳನ್ನು ಪಡೆದಿವೆ.