Job Description: * ಕೆನಡಾ ಸರ್ಕಾರ ಇದೇ ಮೊದಲ ಬಾರಿಗೆ ಭಾರತವನ್ನು ಸೈಬರ್ ಬೆದರಿಕೆ ಪಟ್ಟಿಗೆ ಸೇರಿಸಿದೆ.* ಕೆನಡಾ ವಿರುದ್ಧ ಭಾರತದ ಸರ್ಕಾರದ ಪ್ರಾಯೋಜಿತ ಬೇಹುಗಾರಿಕೆ ನಡೆಯಬಹುದು ಎಂದು ಆರೋಪಿಸಿ ಈ ಕ್ರಮ ಕೈಗೊಂಡಿದೆ.* ಸದ್ಯ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿರುವುದರ ನಡುವೆ, ಕೆನಡಾದ ರಾಷ್ಟ್ರೀಯ ಸೈಬರ್‌ ಬೆದರಿಕೆ ಮೌಲ್ಯಮಾಪನ (ಎನ್‌ಸಿಟಿಎ) 2025–26 ವರದಿ ಬಿಡುಗಡೆಯಾಗಿದೆ. ಸೈಬರ್ ಸೆಕ್ಯುರಿಟಿ ಸೆಂಟರ್ ಪ್ರಕಟಿಸಿದ ತನ್ನ ರಾಷ್ಟ್ರೀಯ ಸೈಬರ್ ಅಪಾಯ ಮೌಲ್ಯಮಾಪನ ವರದಿ 2025-2026 ರಲ್ಲಿ ಭಾರತವನ್ನು "ವಿರೋಧಿ" ಅಥವಾ ಎದುರಾಳಿ ಎಂದು ಲೇಬಲ್ ಮಾಡಿದೆ.* ದೇಶದಲ್ಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಎದುರಾಗುವ ಸೈಬರ್‌ ಬೆದರಿಕೆಗಳನ್ನು ದೃಢಪಡಿಸುವ ಈ ವರದಿಯನ್ನು ಕೆನಡಾದ ಸೈಬರ್ ಭದ್ರತೆಯ ತಾಂತ್ರಿಕ ಪ್ರಾಧಿಕಾರವಾಗಿರುವ 'ಸೈಬರ್‌ ಸೆಕ್ಯುರಿಟಿ ಕೇಂದ್ರ' ಅಕ್ಟೋಬರ್ 30 ರಂದು ಬಿಡುಗಡೆ ಮಾಡಿದೆ. ಅದರಲ್ಲಿ, ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ನಂತರದ ಸ್ಥಾನದಲ್ಲಿ ಭಾರತವನ್ನು ಹೆಸರಿಸಲಾಗಿದೆ.* 'ಬೇಹುಗಾರಿಕೆ ಉದ್ದೇಶದಿಂದ ಭಾರತ ಪ್ರಾಯೋಜಿತ ವ್ಯಕ್ತಿಗಳು ಕೆನಡಾ ಸರ್ಕಾರದ ನೆಟ್‌ವರ್ಕ್‌ಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ' ಎಂದು ಅಂದಾಜಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.* 2018, 2020, 2023-24 ಪ್ರಕಟವಾಗಿದ್ದ ವರದಿಗಳಲ್ಲಿ ಭಾರತದ ಹೆಸರು ಉಲ್ಲೇಖವಾಗಿರಲಿಲ್ಲ. ಬೇಹುಗಾರಿಕೆ ಉದ್ದೇಶದಲ್ಲಿ ಭಾರತದ ಸರ್ಕಾರಿ ಪ್ರಾಯೋಜಿತವಾಗಿ ಕೆನಡಾ ಸರ್ಕಾರದ ಜಾಲಗಳ ವಿರುದ್ಧ ಸೈಬರ್ ಅಪಾಯ ಎದುರಾಗಬಹುದು ಎಂಬುದು ತಮ್ಮ ಅಂದಾಜು. ಕೆನಡಾ ಮತ್ತು ಭಾರತದ ನಡುವೆ ಇರುವ ಅಧಿಕೃತ ದ್ವಿಪಕ್ಷೀಯ ಸಂಬಂಧವು ಈ ಸೈಬರ್ ಅಪಾಯಕಾರಿ ಚಟುವಟಿಕೆಯನ್ನು ಹೆಚ್ಚಿಸಬಹುದು ಎಂದೂ ಈ ವರದಿ ಎಚ್ಚರಿಸಿದೆ.ಹಳಸಿದ ಭಾರತ ಕೆನಡಾ ಸಂಬಂಧ :- * 2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವರ್ಷದ ಹಿಂದೆ ಹೇಳಿದ್ದರು.* ಟ್ರುಡೊ ಹೇಳಿಕೆಯನ್ನು ಭಾರತ ಅಲ್ಲಗಳೆದಿದೆಯಾದರೂ, ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ. ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಹಾಗೂ ರಾಜತಾಂತ್ರಿಕ ಅಧಿಕಾರಿಗಳನ್ನು ನೇರವಾಗಿ ಹೆಸರಿಸಿತ್ತು ಕೆನಡಾ.* ಬಳಿಕ ಭಾರತವು ಈ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿತು. ಈ ಹಂತದಲ್ಲೇ ಕೆನಡಾ ದೇಶವು ಭಾರತವನ್ನು ಉತ್ತರಕೊರಿಯಾ, ಇರಾನ್ನಂತಹ ದೇಶಗಳ ಪಟ್ಟಿಗೆ ಸೇರಿಸುವ ಕೆಲಸ ಮಾಡಿದೆ.* ಟ್ರುಡೋ ಅವರು ಖಲಿಸ್ತಾನೀ ಪ್ರತ್ಯೇಕತಾವಾದಿಗಳಿಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವ ಆರೋಪ ಇದೆ. ಕೆನಡಾ ನೆಲದಲ್ಲಿ ಖಲಿಸ್ತಾನೀ ಪ್ರತ್ಯೇಕತಾವಾದಿಗಳು ಭಾರತ ವಿರೋಧಿ ಚಟುವಟಿಕೆ ನಡೆಸಿದರೂ ಅವರ ವಿರುದ್ಧ ಕೆನಡಾ ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಭಾರತ ಸರ್ಕಾರ ವಿರುದ್ಧ ನಡೆದ ರೈತ ಪ್ರತಿಭಟನೆಗಳಿಗೆ ಕೆನಡಾ ಸರ್ಕಾರ ಬೆಂಬಲ ನೀಡಿದ್ದು ಹಳಸುತ್ತಿದ್ದ ಸಂಬಂಧಕ್ಕೆ ಇನ್ನಷ್ಟು ಹುಳಿ ಹಿಂಡಿದಂತಾಗಿತ್ತು.