* ಈ ಯೋಜನೆಯಡಿ ಗ್ರಾಮೀಣ ಪ್ರದೇಶದ 30 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಸಕ್ಕರೆ ಕಾಯಿಲೆ, ರಕ್ತದೊತ್ತಡ (ಬಿಪಿ), ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್‌ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಹಂತದ ತಪಾಸಣೆಗಳು ಮನೆ ಬಾಗಿಲಲ್ಲಿ ದೊರೆಯಲಿವೆ.* ಕರ್ನಾಟಕದ ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ಒದಗಿಸಿ, ಅವರ ಆರೋಗ್ಯ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾದ 'ಗೃಹ ಆರೋಗ್ಯ' ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. * ರಾಜ್ಯ ಸರಕಾರದಿಂದ ಮತ್ತೊಂದು ಜನ ಸ್ನೇಹಿ ಯೋಜನೆಯನ್ನು ಜಾರಿಗೆ ತರಲಾಗಿದ್ದು,  ಆರೋಗ್ಯ ಇಲಾಖೆಯಡಿ ಗೃಹ ಆರೋಗ್ಯ(Gruha  arogya) ಯೋಜನೆಗೆ ಅಧಿಕೃತ ಅನುಮೋದನೆಯನ್ನು ನೀಡಿ ಜಾರಿಗೆ ತರಲಾಗಿದೆ.* ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಯೋಜನೆಗೆ ಅಧಿಕೃತವಾಗಿ ಕೋಲಾರ ಜಿಲ್ಲೆಯಲ್ಲಿ ಚಾಲನೆಯನ್ನು ನೀಡಲಿದ್ದು ಜನವರಿ ತಿಂಗಳಿಂದ ರಾಜ್ಯಾದ್ಯಂತ ಈ ಯೋಜನೆ ಗ್ರಾಮೀಣ ಭಾಗದಲ್ಲಿ ಅನುಷ್ಥಾನಕ್ಕೆ ಬರಲಿದೆ.- ರಕ್ತದೊತ್ತಡ ಸಮಸ್ಯೆ, ಮಧುಮೇಹ, ಬಾಯಿ, ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ದೆಯಲ್ಲಿ ಉಸಿರುಗಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ.- ಆರೋಗ್ಯ ಕಾರ್ಯಕರ್ತರ ಒಂದು ತಂಡ ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಭೇಟಿ ಕಡ್ಡಾಯ.- ಆರೈಕೆಯಲ್ಲಿರುವ ರೋಗಿಗಳಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಔಷಧೋಪಚಾರ. ಉಚಿತವಾಗಿ ಮಾತ್ರೆಗಳ ವಿತರಣೆ. 4 ರಿಂದ 6 ತಿಂಗಳಲ್ಲಿ ಸ್ಟೀನಿಂಗ್ ಕಾರ್ಯ ಪೂರ್ಣ. ನಂತರ ಹೆಚ್ಚಿನ ಆರೈಕೆಗಾಗಿ ಒಂದು ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳ ಆಯೋಜನೆ.