* 2024 ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ (02/09/2024) ನಡೆದ ಪ್ಲೇ-ಆಫ್ ಹಣಾಹಣಿಯಲ್ಲಿ ನಿತ್ಯಾ ಶ್ರೀ ಸುಮತಿ ಶಿವನ್ ಮಹಿಳೆಯರ ಸಿಂಗಲ್ಸ್ ಎಸ್‌ಎಚ್ 6 ವಿಭಾಗದಲ್ಲಿ ಇಂಡೋನೇಷ್ಯಾದ ರಿನಾ ಮರ್ಲಿನಾ ಅವರನ್ನು 21-14,  21-6 ರಿಂದ ಸೋಲಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. *  ಭಾರತದ ಜೋಡಿ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರು ಕಾಂಪೌಂಡ್ ಓಪನ್ ಆರ್ಚರಿ ಮಿಶ್ರ ಟೀಮ್ ಈವೆಂಟ್‌ನಲ್ಲಿ ಕಂಚಿನ ಪದಕವನ್ನು ಪಡೆದರು, ತೀವ್ರ ಪೈಪೋಟಿಯಲ್ಲಿ 156-155 ರಲ್ಲಿ ಇಟಲಿಯ ಎಲೆನೊರಾ ಸರ್ತಿ ಮತ್ತು ಮ್ಯಾಟಿಯೊ ಬೊನಾಸಿನಾ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು.*  ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ಯು5 ಸ್ಪರ್ಧೆಯಲ್ಲಿ ಮನೀಶಾ ರಾಮದಾಸ್ ಕಂಚಿನ ಪದಕ ಖಚಿತಪಡಿಸಿದರು. 2022 ರ ವಿಶ್ವ ಚಾಂಪಿಯನ್‌ಶಿಪ್‌ನ ಚಿನ್ನದ ಪದಕ ವಿಜೇತರು ಡೆನ್ಮಾರ್ಕ್‌ನ ಕ್ಯಾಥ್ರಿನ್ ರೋಸೆಂಗ್ರೆನ್ ವಿರುದ್ಧ 21-12, 21-8 ರಿಂದ ಪ್ರಬಲ ಜಯ ಸಾಧಿಸಿದರು. ಈ ಪಂದ್ಯದ ಮೊದಲ ಗೇಮ್ ಅನ್ನು 21-12 ರಿಂದ ಗೆದ್ದುಕೊಂಡ ಅವರು ಎರಡನೇ ಗೇಮ್ ಅನ್ನು 21-8 ರಲ್ಲಿ ಗೆದ್ದು ಕಂಚಿನ ಪದಕವನ್ನು ಗೆದ್ದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.* ಇದುವರೆಗೆ 15 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದೆ. ಭಾರತದ ಪದಕಗಳ ಸಂಖ್ಯೆ ಒಟ್ಟು 15ಕ್ಕೇರಿದೆ. ಇದಲ್ಲದೇ ಭಾರತ ಇದುವರೆಗೆ  3 ಚಿನ್ನ, 5 ಬೆಳ್ಳಿ ಹಾಗೂ 7 ಕಂಚಿನ ಪದಕ ಗೆದ್ದಿದೆ.