* ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಐದನೆ ಬೆಳ್ಳಿ ಪದಕ ಲಭಿಸಿದ್ದು, ಪುರುಷರ ಸಿಂಗಲ್ಸ್ ಎಸ್ಎಲ್4 ಈವೆಂಟ್‌ನಲ್ಲಿ ಭಾರತದ ಅನುಭವಿ ಶಟ್ಲರ್ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.* ಏಕಪಕ್ಷೀಯವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ನ ಲ್ಯೂಕಾಸ್ ಮಜೂರ್ ಅವರ ವಿರುದ್ಧ 0-2 (9-21, 13-21) ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.* ಸುಹಾಸ್‌ ಮೊದಲ ಸೆಟ್ನಲ್ಲಿ 9-21 ರಿಂದ ಸೋಲನ್ನು ಎದುರಿಸಿದರೆ, ಎರಡನೇ ಸೆಟ್ ಅನ್ನು 13-21 ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.* ಇದರೊಂದಿಗೆ ವಿಶ್ವ ನಂ.1 ಶ್ರೇಯಾಂಕದ ಸುಹಾಸ್ ಯತಿರಾಜ್ ಸತತ ಎರಡನೇ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ 2020 ರ ಟೋಕಿಯೋ ಒಲಿಂಪಿಕ್ಸ್ನಲ್ಲೂ ಸುಹಾಸ್ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.* ಸುಹಾಸ್ ಅವರ ಬೆಳ್ಳಿ ಪದಕದೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ ಒಟ್ಟು 12ಕ್ಕೇರಿದೆ. ಇದಲ್ಲದೇ ಭಾರತ ಇದುವರೆಗೆ  2 ಚಿನ್ನ, 5 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದಿದೆ. - ತುಳಸಿಮತಿ ಮುರುಗೇಶನ್ : * ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ಯು5 ಈವೆಂಟ್‌ನಲ್ಲಿ ಭಾರತದ ತುಳಸಿಮತಿ ಮುರುಗೇಶನ್ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಏಕಪಕ್ಷೀಯವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಚೀನಾದ ಕ್ಯು ಕ್ಸಿಯಾ ಯಾಂಗ್ ಅವರ ವಿರುದ್ಧ 0-2 (17-21, 10-21) ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.* ಮಹಿಳೆಯರ SU5 ವಿಭಾಗದಲ್ಲಿ ಚೊಚ್ಚಲ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ಗೆದ್ದ ತುಳಸಿಮತಿ ಮುರುಗೇಶನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. * ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತ ಇದುವರೆಗೆ 11 ಪದಕಗಳನ್ನು ಗೆದ್ದಿದೆ. ಇದರಲ್ಲಿ 2 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳು ಸೇರಿವೆ.* ಮೊದಲ ಸೆಟ್ ಅನ್ನು 17-21 ರಲ್ಲಿ ಸೋತ ಅವರು ಎರಡನೇ ಸೆಟ್ ಅನ್ನು 10-21 ರಿಂದ ಕಳೆದುಕೊಂಡರು. ಇದರಿಂದಾಗಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.