* ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆದ 2024ರ ಕ್ರೀಡಾಕೂಟದಲ್ಲಿ 200 ಕ್ಕೂ ಆಧಿಕ ದೇಶಗಳು ಭಾಗವಹಿಸಿದ್ದವು. ಅಲ್ಲದೆ 9 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಕಣಕ್ಕಿಳಿದಿದ್ದರು. ಇವರಲ್ಲಿ ಅತ್ಯಧಿಕ ಪದಕ ಗೆದ್ದ ದೇಶವೆಂದರೆ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ. * ಅಮೇರಿಕ 40 ಚಿನ್ನ 44 ಬೆಳ್ಳಿ ಮತ್ತು 42 ಕಂಚು ಒಟ್ಟು 126 ಪದಕಗಳೊಂದಿಗೆ ಯುಎಸ್ಎ ಪ್ಯಾರಿಸ್ ಒಲಿಂಪಿಕ್ಸ್ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಚೀನಾ 40 ಚಿನ್ನ 27 ಬೆಳ್ಳಿ ಮತ್ತು 24 ಕಂಚು ಒಟ್ಟು 91 ಪದಕಗಳೊಂದಿಗೆ ಚೀನಾ ದ್ವಿತೀಯ ಸ್ಥಾನ ಅಲಂಕರಿಸಿತು. ಜಪಾನ 20 ಚಿನ್ನ 12 ಬೆಳ್ಳಿ ಮತ್ತು 13 ಕಂಚು ಒಟ್ಟು 45 ಪದಕಗಳೊಂದಿಗೆ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತವು ಒಂದು ಬೆಳ್ಳಿ ಮತ್ತು 5 ಕಂಚಿನ ಪದಕ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನವನ್ನು ಪಡೆದುಕೊಂಡಿದೆ.* ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಭಾರತ 71ನೇ ಸ್ಥಾನದಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 1 ಚಿನ್ನದ ಪದಕದೊಂದಿಗೆ ಪಾಕಿಸ್ತಾನ ಕೂಡ ಭಾರತಕ್ಕಿಂತ ಮುಂದಿದ್ದು 62ನೇ ಸ್ಥಾನದಲ್ಲಿದೆ.* ಭಾರತ ಮನು ಭಾಕರ್ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ, ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಮಿಶ್ರ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ, ಸ್ವಾಪ್ನಿಲ್ ಕುಸಾಲೆ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ, ಅಮನ್ ಸಹ್ರಾವತ್ ಕುಸ್ತಿ ವಿಭಾಗದಲ್ಲಿ ಕಾಚಿನ ಪದಕ, ನೀರಜ್ ಚೋಪ್ರಾ ಜಾವಲಿನ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಮತ್ತು ಪುರುಷರ ಹಾಕಿ ತಂಡದಿಂದ ಕಂಚಿನ ಪದಕಗಳು ದೊರಕಿವೆ.          * ಪ್ಯಾರಿಸ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಭಾರತ 71ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇದು ಕಳೆದ 24 ವರ್ಷಗಳಲ್ಲೇ ಭಾರತಕ್ಕೆ ಕಡಿಮೆ ಸ್ಥಾನ ಎನಿಸಿದೆ. ಈ ಮುನ್ನ 1996 ಮತ್ತು 2000ದ ಒಲಿಂಪಿಕ್ಸ್‌ನಲ್ಲೂ ಭಾರತ 71ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ನಂತರದ 5 ಒಲಿಂಪಿಕ್ಸ್‌ಗಳಲ್ಲಿ ಭಾರತ ಕ್ರಮವಾಗಿ 65, 50, 55, 67, 48 ಸ್ಥಾನ ಗಳಿಸಿತ್ತು . ಈ ಭಾರಿ ಚಿನ್ನ ಅಥವಾ ಹೆಚ್ಚಿನ ಬೆಳ್ಳಿ ಪದಕ ಗೆಲ್ಲದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ವಿನೇಶ್‌ಗೆ ಬೆಳ್ಳಿ ಸಿಕ್ಕರೆ ಭಾರತ ಪದಕಪಟ್ಟಿಯಲ್ಲಿ 68ನೇ ಸ್ಥಾನಕ್ಕೇರುತಿತ್ತು. * ಅವಳಿ ಕಂಚು ವಿಜೇತೆ ಮನು ಭಾಕರ್ ಮತ್ತು ಸತತ 2ನೇ ಕಂಚು ವಿಜೇತ ಹಾಕಿ ತಂಡದ ಗೋಲು ಕೀಪರ್ ಪಿಆರ್ ಶ್ರೀಜೇಶ್ ಸಮಾರೋಪ ಸಮಾರಂಭದ ಕ್ರೀಡಾಪಟುಗಳ ಪಥಸಂಚಲನದಲ್ಲಿ ಧ್ವಜಧಾರಿಗಳಾಗಿ ಭಾರತ ತಂಡವನ್ನು ಮುನ್ನಡೆಸಿದರು.* ಮುಂದಿನ 2028ರ ಒಲಿಂಪಿಕ್ಸ್‌ ಆತಿಥ್ಯ ವಹಿಸಲಿರುವ ಅಮೆರಿಕದ ಲಾಸ್ ಏಂಜಲಿಸ್‌ಗೆ ಒಲಿಂಪಿಕ್ಸ್ ಧ್ವಜವನ್ನು ಹಸ್ತಾಂತರಿಸಲಾಯಿತು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಥಾಮಸ್ ಬಾಚ್, ಲಾಸ್ ಏಂಜಲಿಸ್ ಮೇಯರ್ ಕರೆನ್‌ ಬಾಸ್‌ಗೆ ಧ್ವಜ ನೀಡಿದರು.* ಪ್ಯಾರಿಸ್ ಒಲಿಂಪಿಕ್ಸ್ ಪದಕಗಳ ಪಟ್ಟಿ: ಅಮೇರಿಕ : 126ಚೀನಾ : 91ಜಪಾನ : 45ಆಸ್ಟ್ರೇಲಿಯಾ : 53ಫ್ರಾನ್ಸ್ : 64ನೆದರ್ಲ್ಯಾಂಡ್ಸ್ : 34 ಬ್ರಿಟನ್ : 65 ದಕ್ಷಿಣ ಕೊರಿಯಾ : 32ಇಟಲಿ : 40 ಜರ್ಮನಿ : 33ನ್ಯೂಜಿಲಂಡ್ : 20ಕೆನಡ : 27ಬೆಲ್ಜಿಯಂ : 10ಪಾಕಿಸ್ತಾನ : 1ಉತ್ತರ ಕೊರಿಯಾ : 6ಭಾರತ : 6ಕತಾರ್ : 1* ಆಗಸ್ಟ್ 28ರಿಂದ ಸೆಪ್ಟೆಂಬರ್ 8 ವರೆಗೆ ಪ್ಯಾರಿಸ್ ನಲ್ಲಿ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ನಡೆಯಲಿದೆ. 22 ಕ್ರೀಡೆಗಳಲ್ಲಿ 549 ಸ್ವರ್ಣ ಪದಕಗಳ ಸ್ಪರ್ಧೆಗಳು ನಡೆಯಲಿವೆ. ಭಾರತದ 69 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.