* ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ. * 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್‌ 100 ಗ್ರಾಂ ತೂಕ ಹೆಚ್ಚಾಗಿದ್ದಾರೆ ಎನ್ನುವ ಕಾರಣಕ್ಕೆ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡಿದ್ದಾರೆ.* ಒಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಕುಸ್ತಿಪಟು ರೋಚಕವಾಗಿ ಫೈನಲ್‌ಗೆ ಪ್ರವೇಶಿಸಿದ್ದರು. ವಿನೇಶ್ ಫೋಗಟ್ ಖಚಿತವಾಗಿ ಬಂಗಾರ ಗೆಲ್ಲುವ ನಿರೀಕ್ಷೆ ಭಾರತೀಯರಿಗಿತ್ತು. * ಆಗಸ್ಟ್ 06 ರಂದು (ಮಂಗಳವಾರ) ಆರಂಭಿಕ ಸುತ್ತಿನಲ್ಲಿ ವಿಶ್ವದ ನಂಬರ್ ಒನ್ ಮತ್ತು ಹಾಲಿ ಚಾಂಪಿಯನ್ ಯುಯಿ ಸುಸಾಕಿಯನ್ನು ಸೋಲಿಸುವ ಮೂಲಕ ಕುಸ್ತಿ ಅಖಾಡದಲ್ಲಿ ಸಂಚಲನ ಮೂಡಿಸಿದ್ದರು. ಕ್ವಾರ್ಟರ್ ಫೈನಲ್‌, ಸೆಮಿಫೈನಲ್‌ನಲ್ಲಿ ಭರ್ಜರಿ ಗೆಲುವಿನ ಮೂಲಕ ಫೈನಲ್‌ ಪ್ರವೇಶಿಸಿದ್ದರು. ಭಾರತಕ್ಕೆ ಅದಾಗಲೇ ಬೆಳ್ಳಿ ಪದಕ ಖಚಿತವಾಗಿತ್ತು.* ಆಗಸ್ಟ್ 06 ರಂದು ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಉಕ್ರೇನ್‌ನ (3 ಬಾರಿ CWG ಚಿನ್ನದ ಪದಕ ವಿಜೇತೆ) ಒಕ್ಸಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು. * ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅವರು, ಅಮ್ಮ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಛಿದ್ರವಾಯಿತು. ನನ್ನ ಧೈರ್ಯ ಸಂಪೂರ್ಣ ಕುಗ್ಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ ಎಂದು ಬರೆದುಕೊಂಡಿದ್ದಾರೆ.* ವಿಶ್ವ ಕುಸ್ತಿ ಸಂಸ್ಥೆ ಯುಡಬ್ಲ್ಯುಡಬ್ಲ್ಯು ನಿಯಮಾವಳಿ ಪ್ರಕಾರ ಪ್ರತಿ ದೇಹತೂಕ ವಿಭಾಗದ ಸ್ಪರ್ಧೆಯ ದಿನ ಬೆಳಗ್ಗೆ ಕುಸ್ತಿಪಟುಗಳ ತೂಕ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಅವರು ತೂಕಪರೀಕ್ಷೆಗೆ ಹಾಜರಾಗದಿದ್ದರೆ ಅಥವಾ ತಮ್ಮ ವಿಭಾಗಕ್ಕಿಂತ ಅಧಿಕ ತೂಕವಿದ್ದರೆ ಅನರ್ಹಗೊಳ್ಳುತ್ತಾರೆ.* ಕುಸ್ತಿ, ಬಾಕ್ಸಿಂಗ್, ವೇಯ್ಸಲಿಫ್ಟಿಂಗ್ ಸಹಿತ ವಿವಿಧ ದೇಹತೂಕ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ತೂಕವನ್ನು ಕಾಯ್ದುಕೊಳ್ಳಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.* ವಿನೇಶ್ ಫೋಗಟ್ ಅವರು ಸ್ವಾಭಾವಿಕ ದೇಹತೂಕ 56-57 ಕೆಜಿ ಆಗಿದ್ದು, ಅವರು 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ತೂಕ ಇಳಿಸಿಕೊಳ್ಳಲು ವಿನೇಶ್ ಆಹಾರ, ನೀರು ತ್ಯಜಿಸಿದ್ದರು. ವಿನೇಶ್ ತೂಕವನ್ನು ತಗ್ಗಿಸುವ ಸಲುವಾಗಿ ಅವರ ಕೋಚ್‌ಗಳು ಮತ್ತು ಇತರ ತರಬೇತಿ ಸಿಬ್ಬಂದಿ, ಕೂದಲು ಕತ್ತರಿಸುವುದು ಮತ್ತು ರಕ್ತ ಹೊರತೆಗೆಯುವಂಥ ಕಠಿಣ ಕ್ರಮಗಳನ್ನೂ ಕೈಗೊಂಡಿದ್ದರು.