* ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಐದನೇ ದಿನ ಭಾರತಕ್ಕೆ ಎಂಟನೇ ಪದಕ ಲಭಿಸಿದೆ. ಪುರುಷರ ಎಫ್56 ಡಿಸ್ಕಸ್ ಥ್ರೋ ಈವೆಂಟ್ನಲ್ಲಿ ಭಾರತದ ಯೋಗೇಶ್‌ ಕಾಥುನಿಯಾ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.* ಯೋಗೇಶ್ 42.22 ಮೀಟರ್ ದೂರ ಡಿಸ್ಕಸ್ ಎಸೆದು ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಯೋಗೇಶ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಇದು ಎರಡನೇ ಬೆಳ್ಳಿ ಪದಕವಾಗಿದ್ದು, ಯೋಗೇಶ್ ಅವರು ಮೂರು ಬಾರಿ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತರಾಗಿದ್ದಾರೆ. ಅವರು 2021 ರಲ್ಲಿ ನಡೆದಿದ್ದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಬೆಳ್ಳಿ ಪದಕ ಗೆದ್ದಿದ್ದರು.* ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 46.86 ಮೀಟರ್‌ಗಳ ಪ್ಯಾರಾಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.* ಗ್ರೀಸ್‌ನ ಕಾನ್‌ಸ್ಟಾಂಟಿನೋಸ್ ಝೌನಿಸ್ 41.32 ಎಸೆದು ಕಂಚಿನ ಪದಕ ಗೆದ್ದರು, ಇನ್ನೂ ಅವರು ಯೋಗೇಶ್ ಕಥುನಿಯಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತ ಎಂಟನೇ ಪದಕ ಗೆದ್ದಿದೆ.* 27 ವರ್ಷದ ಆಟಗಾರ ಈವೆಂಟ್‌ನಲ್ಲಿ 42.22 ಮೀಟರ್ ದೂರಕ್ಕೆ ಅತ್ಯುತ್ತಮವಾಗಿ ಎಸೆದಿದ್ದಾರೆ. ಇದು ಅವರ ಋತುವಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್‌ನ ಪ್ಯಾರಾ-ಅಥ್ಲೆಟಿಕ್ಸ್ ಪುರುಷರ ಡಿಸ್ಕಸ್ ಎಫ್ 56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.