* ನೌಕಪಡೆಯ ಮುಂಬಯಿ ಮುಖ್ಯ ಕಚೇರಿಯ ಪಶ್ಚಿಮ ಕಮಾಂಡ್‌ನ‌ ವೈದ್ಯಕೀಯ ಮುಖ್ಯಸ್ಥರಾಗಿ ಉಡುಪಿ ಮೂಲದ ಡಾ.ಕೃಷ್ಣಮೂರ್ತಿ ಅಧಿಕಾರಿಯವರು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.* ನೌಕಪಡೆಯ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಉಡುಪಿ ಭಾಗದ ಮೊದಲಿಗರು ಇವರಾಗಿದ್ದಾರೆ.* ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದು, ಕಳೆದ 33 ವರ್ಷದಿಂದ ನೌಕಪಡೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಪೀಡಿಯಾಟ್ರಿಕ್ಸ್‌ ವಿಭಾಗದ ಮುಖ್ಯಸ್ಥರಾಗಿ ಐಎನ್‌-ಅಸ್ವಿನಿ ಮತ್ತು ಎಎಫ್ಎಂಸಿ (ಆರ್ಮ್ ಫೋರ್ಸ್‌ ಮೆಡಿಕಲ್‌ ಕಾಲೇಜ್‌) ಹಾಗೂ ಐಎನ್‌ಎಚ್‌ಎಸ್‌ ಧನ್ವಂತರಿ ಹಾಗೂ ಐಎನ್‌ಎಚ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲೂ ಉನ್ನತ ಹುದ್ದೆ ಅಲಂಕರಿಸಿದ್ದರು.* ಇವರು ನ್ಯೂರಾಲಜಿ ತಜ್ಞರಾಗಿದ್ದು, ವೈದ್ಯಕೀಯ ಶಿಕ್ಷಣದ ಇಂಟರ್‌ನ್ಯಾಷನಲ್‌ ಫೈಮೆರ್‌ ಫೆಲೊಶಿಪ್‌ ಪಡೆದಿದ್ದಾರೆ.* ಸಿಎಂಒ ಆಗಿ ಅಧಿಕಾರ ಸ್ವೀಕರಿಸುವ ಮೊದಲು ಭಾರತೀಯ ಸೇನೆಯಲ್ಲಿ ಸೆಕೆಂಡ್‌ಮೆಂಟ್‌ನಲ್ಲಿ ಎಡಿಜಿಎಂಎಸ್‌ ಆಗಿದ್ದರು.