* ವರ್ಲ್ಡ್ ಎಕನಾಮಿಕ್ ಫೋರಮ್ (WEF) ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ 2024 ರಲ್ಲಿ ಭಾರತವು 119 ದೇಶಗಳಲ್ಲಿ 39 ನೇ ಸ್ಥಾನದಲ್ಲಿದೆ . ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ನಂ.1 ಸ್ಥಾನದಲ್ಲಿದೆ.* ಭಾರತವು ದಕ್ಷಿಣ ಏಷ್ಯಾದಲ್ಲಿ ಅಗ್ರ ಶ್ರೇಯಾಂಕದ ದೇಶವಾಗಿದೆ.* ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವು ವಿಶ್ವ ಆರ್ಥಿಕ ವೇದಿಕೆ (WEF) ಬಿಡುಗಡೆ ಮಾಡಿದ ಎರಡು ವರ್ಷದ ವರದಿಯಾಗಿದೆ . ಇದಕ್ಕೂ ಮೊದಲ ಈ ಸೂಚ್ಯಂಕವನ್ನು 2022 ರಲ್ಲಿ ಬಿಡುಗಡೆ ಮಾಡಲಾಯಿತು.* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕವನ್ನು ಇಂಗ್ಲೆಂಡ್‌ನ ಸರ್ರೆ ವಿಶ್ವವಿದ್ಯಾಲಯದ   ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ .* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ವಿಶ್ವದ ಅಗ್ರ ಐದು ಶ್ರೇಯಾಂಕದ ದೇಶಗಳು ಈ ಕೆಳಗಿನಂತಿವೆ :1. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ -   ಸ್ಕೋರ್ 5.242. ಸ್ಪೇನ್ - ಸ್ಕೋರ್ 5.183. ಜಪಾನ್ - ಸ್ಕೋರ್ 5.094. ಫ್ರಾನ್ಸ್ - ಸ್ಕೋರ್ 5.075. ಆಸ್ಟ್ರೇಲಿಯಾ - ಸ್ಕೋರ್ 5.00* 2024 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವ ದೇಶ (119) ಮಾಲಿ ಸ್ಕೋರ್ - 2.78, 118ನೇ ಸ್ಥಾನದಲ್ಲಿರುವ ದೇಶ ಸಿಯೆರಾ ಲಿಯೋನ್ -ಸ್ಕೋರ್ 2.9* 2024 ರ ಸೂಚ್ಯಂಕದಲ್ಲಿ ಭಾರತದ ಒಟ್ಟಾರೆ ಸ್ಕೋರ್ 4.25 ಆಗಿದೆ.