* ಕೇಂದ್ರ ಪ್ರವಾಹ ನಿರ್ವಹಣಾ ನಿಧಿ ಪಡೆಯಲು 'ಪ್ರವಾಹ ಪ್ರದೇಶ ವಲಯ' ಕಾಯ್ದೆಯನ್ನು ಎಲ್ಲ ರಾಜ್ಯಗಳು ಕಡ್ಡಾಯಗೊಳಿಸಬೇಕು ಎನ್ನುವ ಷರತ್ತು ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.* ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶಗಳ ಯೋಜನೆಗಳಡಿ (ಎಫ್‌ಎಂಬಿಎಪಿ) ಅನುದಾನವನ್ನು ಪಡೆದುಕೊಳ್ಳಲು ರಾಜ್ಯಗಳು 'ಪ್ರವಾಹ ವಲಯ ಕಾಯ್ದೆ'ಯನ್ನು ಜಾರಿಗೆ ತರುವುದನ್ನು ಜಲಶಕ್ತಿ ಸಚಿವಾಲಯವು ಕಡ್ಡಾಯಗೊಳಿಸುವ ಪ್ರಸ್ತಾವವನ್ನು ಇರಿಸಿದೆ.* ಈ ಮಸೂದೆಯು ಪ್ರವಾಹ ವಲಯದ ಅಧಿಕಾರಿಗಳಿಗೆ, ಸಮೀಕ್ಷೆಗಳು, ಪ್ರವಾಹ ಪ್ರದೇಶಗಳ ವಿವರಣೆ, ಪ್ರವಾಹ ಪ್ರದೇಶಗಳ ವ್ಯಾಪ್ತಿಗಳ ಅಧಿಸೂಚನೆ, ಪರಿಹಾರ ಕಲ್ಪಿಸುವುದು. ಪ್ರವಾಹ ಪ್ರದೇಶ ಬಳಕೆಯ ಮೇಲಿನ ನಿರ್ಬಂಧಗಳು, ಅಡೆತಡೆಗಳನ್ನು ನಿವಾರಿಸುವ ಸಂಬಂಧ ಮಾರ್ಗಸೂಚಿಗಳನ್ನು ಒದಗಿಸಲಿದೆ.* ಈ ಸಮಗ್ರ ಮಾರ್ಗಸೂಚಿಗಳ ಹೊರತಾಗಿಯೂ ಅನೇಕ ರಾಜ್ಯಗಳು ಈ ಕಾಯ್ದೆ ಜಾರಿಗೊಳಿಸುವ ಇನ್ನು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮಣಿಪುರ, ರಾಜಸ್ಥಾನ, ಉತ್ತರಾಖಂಡ ಮತ್ತು ಹಿಂದೆ ರಾಜ್ಯದ ಸ್ಥಾನಮಾನ ಹೊಂದಿದ್ದ ಜಮ್ಮುವಿನಂತಹ ನಾಲ್ಕು ರಾಜ್ಯಗಳು ಮಾತ್ರ ಕಾಯ್ದೆಯನ್ನು ಜಾರಿಗೆ ತಂದಿವೆ ಎಂದು ಅಧಿಕಾರಿ ಹೇಳಿದರು.* 2022ರ ಮೇ ತಿಂಗಳಲ್ಲಿ ಕೇಂದ್ರ ಜಲ ಶಕ್ತಿ ಸಚಿವಾಲಯವು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಸೂಕ್ತ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿತ್ತು. 2023ರ ಜನವರಿಯಲ್ಲಿ ನಡೆದ ಸಭೆಯಲ್ಲಿ, ಸಮಗ್ರ ಪ್ರವಾಹ ನಿರ್ವಹಣೆ ಮತ್ತು ಪ್ರವಾಹ ಹಾನಿ ತಗ್ಗಿಸಲು ಪ್ರವಾಹ ವಲಯದ ಪ್ರಾಮುಖ್ಯತೆಯನ್ನು ಸಚಿವಾಲಯದ ಕಾರ್ಯದರ್ಶಿಯವರು ಒತ್ತಿ ಹೇಳಿದ್ದರು' ಎಂದೂ ಅಧಿಕಾರಿ ತಿಳಿಸಿದ್ದಾರೆ.