* ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಏಷ್ಯಾದ ಕ್ರೀಡಾಪಟುಗಳಿಗೆ ಸಾಮರ್ಥ್ಯ ತೋರಿಸಲು ವೇದಿಕೆ ಯಾಗಿರುವ ಏಷ್ಯನ್ ಕ್ರೀಡಾಕೂಟ  ನಡೆಯುತ್ತದೆ. * 1951 ರಲ್ಲಿ ನಡೆದಿದ್ದ ಮೊದಲ ಕೂಟಕ್ಕೆ ನವದೆಹಲಿ ಆತಿಥ್ಯ ವಹಿಸಿತ್ತು. ಅದಕ್ಕೂ ಮುನ್ನ 'ಫಾರ್ ಈಸ್ಟರ್ನ್ ಚಾಂಪಿಯನ್‌ಷಿಪ್ ಗೇಮ್ಸ್' ಎಂಬ ಹೆಸರಿನಲ್ಲಿ ಕ್ರೀಡಾಕೂಟ ಆಯೋಜನೆ- ಯಾಗುತ್ತಿತ್ತು. 1913 ರಲ್ಲಿ ಆರಂಭವಾದ ಈ ಕ್ರೀಡಾಕೂಟ 1934ರಲ್ಲಿ ಮೊಟಕುಗೊಂಡಿತು.* 2ನೇ ವಿಶ್ವಯುದ್ಧದ ಬಳಿಕ ಏಷ್ಯಾದ ಹಲವು ದೇಶಗಳು ಸ್ವತಂತ್ರಗೊಂಡವು. ಫಾರ್ ಈಸ್ಟರ್ನ್ ಗೇಮ್ಸ್ ಮತ್ತೆ ಆರಂಭಿಸಲು ಚೀನಾ, ಫಿಲಿಪೀನ್ಸ್ ಉತ್ಸುಕತೆ ತೋರಿದವು. 1948ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಈ ಬಗ್ಗೆ ಚರ್ಚೆಗಳು ನಡೆದವು. * ಫಾರ್ ಈಸ್ಟರ್ನ್ ಗೇಮ್ಸ್ ಬದಲು, ಒಲಿಂಪಿಕ್ಸ್‌ನಂತೆ- ಯೇ ಏಷ್ಯಾದ ದೇಶಗಳಿಗಾಗಿ ಕ್ರೀಡಾಕೂಟ ಆಯೋಜಿಸುವ ಚಿಂತನೆ ಈ ವೇಳೆ ಮೂಡಿತು. * 1949 ರಲ್ಲಿ ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಸ್ತಿತ್ವಕ್ಕೆ ಬಂತು. 1951 ರಲ್ಲಿ ನವದೆಹಲಿಯಲ್ಲಿ ಮೊದಲ ಏಷ್ಯನ್ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಯಿತು.