* ರಾಜ್ಯದ ಕೆಲವು ಕಡೆಗಳಲ್ಲಿ 'ಹಸಿರು ಬರ' ಪರಿಸ್ಥಿತಿ ಇರುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮನವಿಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.* “ಅಲ್ಪ ಪ್ರಮಾಣದ ಮಳೆ ಬಿದ್ದು, ಮೊಳಕೆಯೊಡೆದ ಬೆಳೆ ಒಣಗಿದೆ. ಸುತ್ತಲಿನ ಪ್ರದೇಶದಲ್ಲಿ ಹಸಿರಿದ್ದರೂ ಬೆಳೆಗಳಿಗೆ ಹಾನಿಯಾಗಿದೆ. ಇದನ್ನು “ಹಸಿರು ಬರ' ಎನ್ನಲಾಗುತ್ತದೆ. * ಈ ಕುರಿತು ರಾಜ್ಯದ ನಾಲ್ಕು ಕೃಷಿ ವಿಜ್ಞಾನ ವಿವಿಗಳು ಮತ್ತು ಒಂದು ತೋಟಗಾರಿಕಾ ವಿವಿತಜ್ಞರಿಂದ ವರದಿ ಪಡೆಯಲಾಗಿದೆ' ಎಂದರು.