Job Description: * ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. ಈ ದೇಶದಿಂದ ಒಬ್ಬ ಮಹಿಳೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ದಾಖಲೆ ಇಲ್ಲ. ಆದರೆ ಮೊಟ್ಟಮೊದಲ ಬಾರಿಗೆ ಸೌದಿ ಅರೇಬಿಯಾ ಮಿಸ್ ಯೂನಿವರ್ಸ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದೆ.* 73 ನೇ ವಿಶ್ವ ಸುಂದರಿ ಸ್ಪರ್ಧೆಯು 2024 ಸೆಪ್ಟೆಂಬರ್ 28 ರಂದು ಮೆಕ್ಸಿಕೊದಲ್ಲಿ ನಡೆಯಲಿದ್ದು, ಮೊದಲ ಬಾರಿಗೆ ಸೌದಿ ಅರೇಬಿಯಾದ ರೂಪದರ್ಶಿ ರೂಮಿ ಅಲ್ಮಾಹ್ವಾನಿ (27) ಅವರು ಪ್ರತಿನಿಧಿಸಿದ್ದಾರೆ ವಿಶ್ವದ ಅತ್ಯಂತ ಜನಪ್ರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ತನ್ನ ದೇಶವನ್ನು ಪ್ರತಿನಿಧಿಸುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.* ಸ್ಥಳೀಯ ಸೌಂದರ್ಯ ಸ್ಪರ್ಧೆಯಲ್ಲಿ ರೂಮಿ ಮಿಸ್ ಸೌದಿ ಅರೇಬಿಯಾ ಕಿರೀಟವನ್ನು ಪಡೆದರು. ಮಿಸ್ ಅರಬ್ ವರ್ಡ್ ಪೀಸ್ 2021 ಮತ್ತು ಮಿಸ್ ವುಮೆನ್ ಸೌದಿ ಅರೇಬಿಯಾ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ.