* ದೇಶದಲ್ಲಿ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡಲು ಆರಂಭಿಸಿರುವ 75,021 ಕೋಟಿ ಮೊತ್ತದ 'ಪಿಎಂ ಸೂರ್ಯ ಘರ್: ಮುಪ್ತ್ ಬಿಜ್ಲಿ ಯೋಜನೆ'ಗೆ ಫೆಬ್ರುವರಿ 29 ರಂದು (ಗುರುವಾರ) ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.* ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ 1 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ 300 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುವ ಗುರಿ ಹೊಂದಲಾಗಿದೆ' ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿದ್ದಾರೆ.* ಫೆಬ್ರುವರಿ 13ರಂದು ಪಿ.ಎಂ ಸೂರ್ಯ ಘರ್ ಯೋಜನೆಗೆ ಚಾಲನೆ ನೀಡಲಾಗಿದ್ದು, ಮನೆಯ ತಾರಸಿ ಮೇಲೆ ಸೌರ ವಿದ್ಯುತ್ ಫಲಕ ಅಳವಡಿಸಿಕೊಳ್ಳಲು ಮುಂದಾಗುವ ಪ್ರತಿ ಕುಟುಂಬಕ್ಕೆ ಯೋಜನೆಯಡಿ ಸಬ್ಸಿಡಿ ದೊರೆಯಲಿದೆ.* ಉತ್ಪಾದನೆ, ಲಾಜಿಸ್ಟಿಕ್ಸ್, ಪೂರೈಕೆ ಸರಪಳಿ, ಮಾರಾಟ, ಸ್ಥಾಪನೆ ಮತ್ತು ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಂದಾಜು 17 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೆ, ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸಲು ಈ ಯೋಜನೆಯು ನಿರೀಕ್ಷಿಸಲಾಗಿದೆ.* 2 ಕಿಲೋವಾಟ್‌ವರೆಗಿನ ಉಪಕರಣ ಅಳವಡಿಸಿಕೊಳ್ಳುವ ಪ್ರತಿ ಮನೆಯ ಯೋಜನಾ ವೆಚ್ಚದ ಶೇ 60ರಷ್ಟು ಹಣವನ್ನು ಕೇಂದ್ರವೇ ಭರಿಸಲಿದೆ. ಅಲ್ಲದೆ 2ರಿಂದ 3 ಕಿಲೋವಾಟ್ ಅಳವಡಿಕೊಳ್ಳಲು ಮುಂದಾಗುವ ಫಲಾನುಭವಿಗಳಿಗೆ ಶೇ. 40ರಷ್ಟು ಹಣ ನೀಡಲಿದೆ. * 3 ಕಿಲೋವಾಟ್‌ವರೆಗಷ್ಟೇ ಆರ್ಥಿಕ ನೆರವು ಸಿಗಲಿದೆ. 1 ಕಿಲೋವಾಟ್‌ಗೆ 30 ಸಾವಿರ, 2 ಕಿಲೋ ವಾಟ್‌ಗೆ 60 ಸಾವಿರ ಹಾಗೂ 3 ಕಿಲೋವಾಟ್ ಸಾಮರ್ಥ್ಯದ ಸೌರ ಫಲಕ ಅಳವಡಿಸಿಕೊಂಡರೆ 78 ಸಾವಿರ ಸಬ್ಸಿಡಿ ಸಿಗಲಿದೆ.* 2024-25ನೇ ಸಾಲಿನ ಖಾರೀಪ್ ಋತುವಿಗೆ (ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ವರೆಗೆ) ಫಾಸ್ಟೇಟ್ ಮತ್ತು ಪೊಟ್ಯಾಷಿಯಂ (ಪಿ ಆ್ಯಂಡ್ ಕೆ) ರಸಗೊಬ್ಬರಗಳಿಗೆ 24,240 ಕೋಟಿ ಸಬ್ಸಿಡಿಗೆ ಮಂಜೂರಾತಿ ನೀಡಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. * ಡಿಎಪಿ ರಸಗೊಬ್ಬರಗಳಿಗೆ 1,350 (50 ಕೆ.ಜಿ ಚೀಲ) , ಪ್ರತಿ ಕೆ.ಜಿ ನೈಟ್ರೋಜನ್‌ಗೆ 47.02 ರೂ,ಗೆ ಫಾಸ್ಪರಸ್ 28.72, ರೂ.ಗೆ ಪೊಟ್ಯಾಷ 2.38 ರೂ ಹಾಗೂ ಸಲ್ಪರ್‌ಗೆ 1.89 ರೂ.ಗೆ ಸಬ್ಸಿಡಿ ನೀಡಲಾಗಿದೆ.