* ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) - 2013 ರ ಅಡಿಯಲ್ಲಿ ಕೇಂದ್ರ ಸರ್ಕಾರದ ಆಹಾರ ದಾನ್ಯ ಯೋಜನೆಯನ್ನು ಮುಂದಿನ ಐದು ವರ್ಷಗಳ ವರೆಗೆ ವಿಸ್ತರಿಸುವದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.* ಉಚಿತ ಆಹಾರ ಧಾನ್ಯ ಯೋಜನೆ ಅಥವಾ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ನರೇಂದ್ರ ಮೋದಿ ಸರ್ಕಾರವು ಮಾರ್ಚ್ 2020 ರ ಏಪ್ರಿಲ್ ನಿಂದ ಕೋವಿಡ್ -19 ಕಾರಣದಿಂದಾಗಿ ಮೊದಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಈ ಯೋಜನೆ ಜಾರಿಗೊಳಿಸಲಾಯಿತು.* ಈ ಯೋಜನೆಯಡಿ, ಕೇಂದ್ರವು ಬಡವರಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಬರುವ ಕುಟುಂಬಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಒದಗಿಸಲಾದ ಸಬ್ಸಿಡಿ (ಕೆಜಿಗೆ ರೂ 2-3) ರೇಷನ್‌ಗೆ ಹೆಚ್ಚುವರಿಯಾಗಿದೆ.* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಉಚಿತ ಆಹಾರ ಧಾನ್ಯ, ಅಕ್ಕಿ ಅಥವಾ ಗೋಧಿ, ಎನ್ ಎಫ್ ಎಸ್ ಎ  ನ 80 ಕೋಟಿ ಫಲಾನುಭವಿಗಳಿಗೆ ಒದಗಿಸುತ್ತದೆ. ಇತ್ತೀಚಿನ ಜನಗಣತಿಯ ಪ್ರಕಾರ ಸುಮಾರು 81.35 ಕೋಟಿ ಜನರು ಎನ್ ಆಫ್ ಎಸ್ ಎ ವ್ಯಾಪ್ತಿಗೆ ಒಳಪಡುತ್ತಾರೆ.* ಈ ಕಲ್ಯಾಣ ಯೋಜನೆಯಡಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಅಡಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳಿಗೆ,  ನೇರ ಲಾಭ ವರ್ಗಾವಣೆ (ಡಿಬಿಟಿ) ಅಡಿಯಲ್ಲಿ ಬರುವವರು ಸೇರಿದಂತೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸಲಾಗುತ್ತದೆ.* ಅಂತ್ಯೋದಯ ಅನ್ನ ಯೋಜನೆಯಡಿ ಬರುವ ಕುಂಟುಂಬಗಳು ಮಾಸಿಕ 35 ಕೆ.ಜಿ ಆಹಾರ ದಾನ್ಯ ಪಡೆಯುತ್ತಾರೆ. ಆದ್ಯತಾ ಕುಟುಂಬದ ಸದಸ್ಯರಿಗೆ ಅನುಗುಣವಾಗಿ ತಲಾ 5 ಕೆ.ಜಿ ಆಹಾರ ದಾನ್ಯ ಪಡೆಯಲಿದ್ದಾರೆ.* 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪಂಜಾಬ್, ಹರಿಯಾಣ, ರಾಜ್ಯಸ್ಥಾನ, ಚಂಡೀಗಢ, ದೆಹಲಿ, ಗುಜರಾತ ಗೆ ಗೋಧಿಯನ್ನು ಹಂಚಲಾಗಿದೆ ಮತ್ತು ಉಳಿದ ರಾಜ್ಯಗಳಿಗೆ ಅಕ್ಕಿಯನ್ನು ಒದಗಿಸಲಾಗಿದೆ.