* `ನಗುವ ಅನಿಲ' ನೈಟ್ರಸ್ ಆಕ್ಸೈಡ್ ನಿಷೇಧಿಸಿ ಬ್ರಿಟನ್‌ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಮನರಂಜನಾ ಸಾಧನವಾಗಿ ಯುವಕರು ಹೆಚ್ಚಾಗಿ ಈ ಲಾಫಿಂಗ್‌ ಗ್ಯಾಸ್‌ ಮೊರೆ ಹೋಗುತ್ತಿದ್ದು, ಸಣ್ಣ ಡಬ್ಬಿಗಳಲ್ಲಿ ಇದರ ಮಾರಾಟ ಎಗ್ಗಿಲ್ಲದೆ ನಡೆಯುತ್ತದೆ.ಇದರಿಂದಾಗಿ ಹೆಚ್ಚಿನ ಅಪರಾಧ ಪ್ರಕರಣಗಳ ಜೊತೆಗೆ ಅನಾರೋಗ್ಯ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡ ಬ್ರಿಟನ್ ಸರ್ಕಾರ ʻಲಾಫಿಂಗ್‌ ಗ್ಯಾಸ್‌ʼ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ.* ಯು ಕೆ ಸರಕಾರವು ಈ ಗ್ಯಾಸ್ ಅನ್ನು ಬಳಸಿ ಅಪರಾಧಗಳಲ್ಲಿ ವಾಲ್ಗೊಂಡವರಿಗೆ ಎರಡು ವರ್ಷ ಹಾಗೂ ಇದನ್ನು ಮಾರಾಟ ಮಾಡಿದವರಿಗೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದೆ. * ಈ ಗ್ಯಾಸ್ ಅನ್ನು ಬಳಸುವುದರಿಂದ ರಕ್ತಹೀನತೆ, ನರ ಹಾನಿ ಮತ್ತು ಬೆನ್ನುಹುರಿಯ ಗಾಯಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.* “ನೈಟ್ರಸ್ ಆಕ್ಷಡ್‌ನ ದುರುಪಯೋಗವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲದ ಕಾನೂನುಬಾಹಿರವಾಗಿದ ಇನ್ನೊಂದ ಇದನ್ನು ಬಳಸದಂತೆ ನಾವು ಸಾರ್ವಜನಿಕರಿಗೆ, ಪ್ರಮುಖವಾಗಿ ಯುವಜನರಿಗೆ ಸ್ಪಷ್ಟ ಸಂಕೇತವನ್ನು ಕಳುಹಿಸುತ್ತಿದ್ದೇವೆ' ಎಂದು ಬ್ರಿಟನ್ ನ ಗೃಹ ಸಚಿವ ಕ್ರಿಸ್ ಫಿಲ್ಟ್  ಅವರ ತಿಳಿಸಿದ್ದಾರೆ.