* ಚಿತ್ರೋತ್ಸವದ ಕೇಂದ್ರವಾದ ಪಣಜಿಯ ಐನಾಕ್ಸ್ ಕಾಂಪ್ಲೆಕ್ಸ್‌ನಲ್ಲಿ ನವೆಂಬರ್ 19 ರಂದು ಐವತ್ತನಾಲ್ಕನೆಯ(54) ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಕಾರ್ಯಕ್ರಮ ಪ್ರಾರಂಭಗೊಂಡಿದೆ.* ನ.20 ರಿಂದ 28ರವರೆಗೆ ಚಿತ್ರೋತ್ಸವಕ್ಕಾಗಿ ದೇಶ, ವಿದೇಶಗಳಿಂದ ಬರುವ ಪ್ರತಿನಿಧಿಗಳಿಗೆ ಮತ್ತು ಸ್ಥಳೀಯರಿಗೆ ಜಗತ್ತಿನ ವಿವಿಧ ದೇಶಗಳ 195ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡುವ ಮತ್ತು ಚರ್ಚಿಸುವ ಅವಕಾಶವಿದೆ.* ಸೋಮವಾರ ಸಂಜೆ (ನ.20) 5 ಗಂಟೆಗೆ ಗೋವಾ ವಿಶ್ವ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವದ ಉದ್ಘಾಟನೆ ನೆರವೇರಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ದೀಪ ಬೆಳಗಿಸಿ ಚಿತ್ರೋತ್ಸವವನ್ನು ಉದ್ಘಾಟಿಸಿದ್ದಾರೆ. * ಸತ್ಯಜಿತ್ ರೇ ಹೆಸರಿನಲ್ಲಿ ನೀಡುವ ಜೀವಮಾನ ಸಾಧನೆ ಪುರಸ್ಕಾರಕ್ಕೆ ಸ್ವೀಕರಿಸಲಿರುವ ಹಾಲಿವುಡ್ ನಟ ಮೈಕೇಲ್ ಡಗ್ಲಾಸ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವರು.