* ಕೇಂದ್ರ ಸರ್ಕಾರವು ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ್ ಅಥವಾ ಕುಸುಮ್ ಯೋಜನೆಯನ್ನು ಘೋಷಿಸಿದ್ದು, ಇದು ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.* ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ್ (PM-KUSUM) ಯೋಜನೆಯು 2019 ರಲ್ಲಿ ಪ್ರಾರಂಭವಾಗಿದ್ದು, ರೈತರಿಗೆ ಇಂಧನ ಭದ್ರತೆಯನ್ನು ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರದಲ್ಲಿ ಶುದ್ಧ ಶಕ್ತಿಯ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.* KUSUM ಯೋಜನೆಯ ರೈತ ಐದು ವರ್ಷಗಳ ಅವಧಿಯಲ್ಲಿ 28,250 MW ವರೆಗೆ ವಿಕೇಂದ್ರೀಕೃತ ಸೌರ ವಿದ್ಯುತ್ ಉತ್ಪಾದನೆಯನ್ನು ಒಳಗೊಂಡಿರುವ ರೈತ-ಆಧಾರಿತ ಯೋಜನೆಯಾಗಿದೆ.ಹಾಗೂ ದೇಶಾದ್ಯಂತ 30 ಮಿಲಿಯನ್ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಗುರಿ ಅಳವಡಿಸಿಕೊಳ್ಳಲಾಗಿದೆ.