Job Description: * ಭಾರತ ಫುಟ್ ಬಾಲ್ ತಂಡದ ಮಾಜಿ ಮಿಡ್ ಫೀಲ್ಡರ್ ಆಟಗಾರರಾದ 81 ವರ್ಷದ ಪರಿಮಲ್ ಡೇ ರವರು ಬುಧವಾರ ಫೆ.01 ರಂದು ನಿಧನರಾದರು. * ಪರಿಮಲ್ ಡೇ ರವರು 1966 ರಲ್ಲಿ ಮರ್ಡೇಕಾ ಕಪ್ ಗೆದ್ದ ಭಾರತ ಫುಟ್ ಬಾಲ್ ತಂಡದ ಸದಸ್ಯರಾಗಿದ್ದರು. 1960 ರ ದಶಕದಲ್ಲಿ ಕೌಶಲಯುತ ಆಟಗಾರರಾಗಿದ್ದ ಪರಿಮಲ್ ರವರು ರಾಷ್ಟೀಯ ತಂಡದ ಪರ ಐದು ಪಂದ್ಯಗಳಲ್ಲಿ ಆಡಿದ್ದರು. * ಕ್ವಾಲಾಲಂಪುರದಲ್ಲಿ ನಡೆದಿದ್ದ ಮರ್ಡೇಕಾ ಕಪ್ ಟೂರ್ನಿಯಲ್ಲಿ ಅವರು ತಮ್ಮ ಏಕೈಕ ಗೋಲು ಗಳಿಸಿದ್ದರು. ಈಸ್ಟ್ ಬೆಂಗಾಲ ತಂಡದಲ್ಲಿ ಆಡಿದ್ದ ಅವರು ಡುರಾಂಡ್ ಕಪ್, ರೋವರ್ಸ್ ಕಪ್ ಇನ್ನಿತರ ಟೂರ್ನಿಗಳಲ್ಲಿ ಆಟವಾಡಿದ್ದರು. ಸಂತೋಷ್ ಟ್ರೋಫಿ ಟೂರ್ನಿ ಗೆದ್ದ 1962,1969 ಬಂಗಾಳ ತಂಡದ ಪರವೂ ಕೂಡ ಆಟವಾಡಿದ್ದರು.