* ಗ್ವಾಲಿಯರ್‌ನಲ್ಲಿ ಫೆಬ್ರುವರಿ 11 ರಿಂದ 17ರವರೆಗೆ 15 ವರ್ಷದೊಳಗಿನ ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜಿಸಲಾಗುವುದು ಎಂದು ಭಾರತ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ತಾತ್ಕಾಲಿಕ ಸಮಿತಿ ಘೋಷಿಸಿದೆ.* ಗ್ವಾಲಿಯರ್‌ನ ಶಕ್ತಿ ನಗರದ ಎಲ್‌ಎನ್‌ಯುಪಿಇ ಕ್ಯಾಂಪಸ್‌ನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಲಕ್ಷ್ಮಿಬಾಯಿ ನ್ಯಾಷನಲ್‌ ಶಿಕ್ಷಣ ಸಂಸ್ಥೆಯಲ್ಲಿ ಈ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಸುಮಾರು 1200 ಕುಸ್ತಿಪಟುಗಳು ಮತ್ತು 300 ಅಧಿಕಾರಿಗಳು ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಭೂಪೇಂದರ್ ಸಿಂಗ್ ಬಜ್ಜಾ ಅವರು ತಿಳಿಸಿದ್ದಾರೆ.* ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಆಡಳಿತ ಮಂಡಳಿ ಡಿಸೆಂಬರ್ ಕೊನೆ ವಾರದಲ್ಲಿ ಉತ್ತರ ಪ್ರದೇಶದ ಗೊಂಡಾದಲ್ಲಿ 20-23 ವಯೋಮಿತಿಯ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜಿಸುವುದಾಗಿ ಘೋಷಿಸಿತ್ತು. ಆದರೆ, ಕ್ರೀಡಾ ಸಚಿವಾಲಯವು ಡಿ. 24ರಂದು ನೂತನ ಅಡಳಿತ ಮಂಡಳಿಯನ್ನು ಅಮಾನತುಗೊಳಿಸಿತು. ಆದರಿಂದ ರಾಷ್ಟ್ರೀಯ ಚಾಂಪಿಯನ್‌ಷಿಪ್ ಅನ್ನು ಮುಂದೂಡಲಾಗಿತ್ತು. * ಜನವರಿ 29 ರಿಂದ ಪುಣೆಯಲ್ಲಿ ಸೀನಿಯರ್ ಚಾಂಪಿಯನ್‌ಷಿಪ್ ಆಯೋಜಿಸುವುದಾಗಿ ಡಬ್ಲ್ಯುಎಫ್‌ಐ ಘೋಷಿಸಿದ್ದರೆ, ಫೆಬ್ರವರಿ 2-5 ರಿಂದ ಜೈಪುರದಲ್ಲಿ ಆಯೋಜಿಸುವುದಾಗಿ ತಾತ್ಕಾಲಿಕ ಸಮಿತಿ ತಿಳಿಸಿದೆ.