Job Description: * ಫೆ. 25 ಮತ್ತು 26 ರಂದು ಜರ್ಮನಿಯ ಚಾನ್ಸಲರ್ ಒಲಾಫ್ ಸ್ಕೋಲ್ಜ್ ರವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಒಲಾಫ್ ಸ್ಕೋಲ್ಜ್ ರವರು ಚಾನ್ಸಲರ್ ಆದ ಬಳಿಕ ಇದೆ ಮೊದಲು ಭಾರತದ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.* ಫೆ. 25 ರಂದು ಒಲಾಫ್ ರವರಿಗೆ ರಾಷ್ಟ್ರಪತಿ ಭವನದ ಮುಂದೆ ವಿದ್ಯುಕ್ತ ಸ್ವಾಗತ ನಡೆಯಲಿದ್ದು, ಅವರು ರಾಷ್ಟ್ರಪತಿ ಮುರ್ಮು ರವರನ್ನು ಭೇಟಿ ಮಾಡಲಿದ್ದಾರೆ. * UNSC ಸುಧಾರಣೆಗಳಿಗಾಗಿ G4 ನ ಭಾಗವಾಗಿ ಭಾರತ ಮತ್ತು ಜರ್ಮನಿ ಬಹುಪಕ್ಷೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಿಕಟವಾಗಿ ಕೆಲಸ ಮಾಡುತ್ತವೆ.